ಈ ನಟಿ ಈಗ ರಾಷ್ಟ್ರಾದ್ಯಂತ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಹಾಗಂತ ಈಕೆ ಸ್ಟಾರ್ ನಟಿಯೇನೂ ಅಲ್ಲ. ಹೆಸರು ಅರ್ಪಿತಾ ಮುಖರ್ಜಿ. ಈಕೆಯ ಮನೆ ಮೇಲೆ ಇತ್ತೀಚೆಗೆ ಇಡಿ ಅಧಿಕಾರಿಗಳು ನಡೆಸಿದ್ದರು. ಆಗ ಮನೆಯಲ್ಲಿ ಸಿಕ್ಕ ಹಣ, ಚಿನ್ನ ನೋಡಿ ಅಧಿಕಾರಿಗಳೇ ದಂಗು ಬಡಿದಿದ್ದರು. ಲೆಕ್ಕ ಹಾಕುವುದಕ್ಕೆ 10ಕ್ಕೂ ಹೆಚ್ಚು ಬ್ಯಾಂಕ್ ಅಧಿಕಾರಿಗಳನ್ನು ಅರ್ಪಿತಾ ಮನೆಗೆ ಕರೆಸಿಕೊಂಡಿದ್ದರು.
ಆಕೆಯ ಮನೆಯಲ್ಲಿ 500, 2000 ನೋಟುಗಳ ರಾಶಿಯೇ ಸಿಕ್ಕಿತ್ತು. ಒಟ್ಟು ನೋಟುಗಳ ಲೆಕ್ಕ 22 ಕೋಟಿಗೂ ಹೆಚ್ಚು. 79 ಲಕ್ಷ ರೂ. ಮೌಲ್ಯದ ಒಡವೆಗಳಿದ್ದವು. 54 ಲಕ್ಷ ರೂ. ಮೌಲ್ಯದ ವಿದೇಶಿ ಹಣವಿತ್ತು. ಕೊಲ್ಕತ್ತಾವೊಂದರಲ್ಲೇ ಕೋಟಿ ಕೋಟಿ ಬೆಲೆ ಬಾಳುವ 20ಕ್ಕೂ ಹೆಚ್ಚು ಫ್ಲ್ಯಾಟ್ ಈಕೆಯ ಹೆಸರಲ್ಲಿತ್ತು.
ಈಕೆ ನಟಿಸಿರುವುದು ಬೆರಳೆಣಿಕೆ ಚಿತ್ರಗಳು. ವಯಸ್ಸು ಕೇವಲ 30. ಬೆಂಗಾಳಿ, ಒಡಿಯಾ ಸೇರಿ ಐದಾರು ಚಿತ್ರಗಳಲ್ಲಿ ನಟಿಸಿರೋ ಈಕೆಗೆ ಜಾಗ್ರಮ್ ಅನ್ನೋ ಉದ್ಯಮಿಯೊಂದಿಗೆ ಮದುವೆಯೂ ಆಗಿತ್ತು. ಆದರೆ ಪತಿಯ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಪತಿಯೂ ಜೊತೆಯಲ್ಲಿಲ್ಲ. 2004ರಿಂದ ಮಾಡೆಲ್ ಆಗಿ, ನಟಿಯಾಗಿ ಚಾಲ್ತಿಯಲ್ಲಿರೋ ಈಕೆ 2012ರ ನಂತರ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ರೀಲ್ಸ್ ಮಾಡುತ್ತಿದ್ದರು.
ಆದರೆ ಈಕೆ ಪ.ಬಂಗಾಳದ ಸಚಿವ ಪಾರ್ಥ ಮಖರ್ಜಿಯವರ ಆಪ್ತರಾಗಿದ್ದರು. ಕೊಲ್ಕತ್ತಾದಲ್ಲಿ ದುರ್ಗಾ ಪೂಜೆಗೆ ವಿಶೇಷ ಮಹತ್ವ. ಅಲ್ಲಿ ನಕ್ತಲಾ ಉದಯನ್ ಎಂಬ ಸಂಘ ಅತ್ಯಂತ ದೊಡ್ದು. ಆ ಸಮಿತಿಯಲ್ಲಿ ಸದಸ್ಯೆಯಾಗಿದ್ದಳು. ಅರ್ಪಿತಾರನ್ನು ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತುಂಬಿದ ವೇದಿಕೆಯಲ್ಲಿ ಹೊಗಳಿ ಕೊಂಡಾಡಿದ್ದರು. ಈಕೆಯ ಹೆಸರಲ್ಲಿ ನೈಲ್ ಆರ್ಟ್‍ಗೆ ಸಂಬಂಧಿಸಿದ ಕೆಲವು ಮಳಿಗೆಗಳಿದ್ದವು. ಬಿಸಿನೆಸ್ ಇತ್ತು.
ಈಕೆಯ ಮನೆ ಮೇಲೆ ಇಡಿಯವರು ದಾಳಿ ಮಾಡೋಕೆ ಕಾರಣ ಈಕೆಯ ಹೆಸರು ಅಲ್ಲಿನ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಕೇಳಿ ಬಂದಿದ್ದು. ಈಕೆಯ ಆಪ್ತನಾಗಿದ್ದ ಸಚಿವ ಪಾರ್ಥ ಚಟರ್ಜಿಯೇ ಆಗ ಶಿಕ್ಷಣ ಸಚಿವನಾಗಿದ್ದ. ಸದ್ಯಕ್ಕೆ ಈ ನಟಿ ಇಡಿ ವಶದಲ್ಲಿದ್ದಾರೆ.