ಡಾಲಿ ಧನಂಜಯ್ ಎಂಥದ್ದೇ ಪಾತ್ರಕ್ಕಾದರೂ ಜೀವ ತುಂಬಬಲ್ಲ ನಟ. ಆದರೆ ಇತ್ತೀಚೆಗೆ ರಗಡ್ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಂಡಿದ್ದ ಡಾಲಿ ಸ್ವಲ್ಪ ಹೋಮ್ಲಿಯಾಗಿ ಕಾಣಿಸಿಕೊಂಡಿರೋದು ಮಾನ್ಸೂನ್ ರಾಗ ಚಿತ್ರದಲ್ಲಿ. ಈ ಚಿತ್ರದಲ್ಲಿ ಡಾಲಿಗೆ ಇದೇ ಮೊದಲ ಬಾರಿಗೆ ಜೊತೆಯಾಗಿರೋದು ಡಿಂಪಲ್ ಕ್ವೀನ್ ರಚಿತಾ ರಾಮ್. ಇದರ ಮಧ್ಯೆ ಚಿತ್ರದ ಪ್ರಮೋಷನ್‍ಗಾಗಿ ಯಶಾ ಶಿವಕುಮಾರ್ ಅವರು ಹಾಡಿ ಕುಣಿದಿರೋ ರಾಗುಸುಧಾ ಥೀಮ್ ಸಾಂಗ್ ಸೂಪರ್ ಹಿಟ್ ಆಗಿದೆ. ಇದೆಲ್ಲದರ ಜೊತೆ ಫ್ಯಾನ್ಸ್ ಆಗಲೇ ಕಟೌಟ್ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ. ಕ್ರೇಜ್ ಅಂದ್ರೆ ಇದು...
ಚಿತ್ರದಲ್ಲಿ ರಚಿತಾ ಅವರದ್ದು ತುಂಬಾ ವಿಭಿನ್ನವಾದ ರೋಲ್. ಅಷ್ಟೇ ಚಾಲೆಂಜಿಂಗ್. ಅಂತಾದ್ದೊಂದು ಪಾತ್ ಒಪ್ಪಿಕೊಳ್ಳೋಕೂ ಧೈರ್ಯ ಬೇಕು ಎನ್ನುತ್ತಾರೆ ಡೈರೆಕ್ಟರ್ ರವೀಂದ್ರನಾಥ್. ತುಂಬಾ ಟಫ್ ರೋಲ್. ರಚಿತಾ ಅದನ್ನು ಚಾಲೆಂಜಿಂಗ್ ಆಗಿ ತೆಗೆದುಕೊಂಡು ನಟಿಸಿದ್ದಾರೆ ಎಂದು ಖುಷಿಯಾಗಿದ್ದಾರೆ ರವೀಂದ್ರನಾಥ್.
ಎ.ಆರ್. ವಿಖ್ಯಾತ್ ನಿರ್ಮಾಣದ ಚಿತ್ರವಿದು.
ಚಿತ್ರಕ್ಕೆ ಸಂಗೀತ ನೀಡಿರುವುದು ಅನೂಪ್ ಸಿಳೀನ್. ರಾಗಸುಧಾ ಸಾಂಗ್‍ನಲ್ಲಿ ಚಂಡೆ ಮತ್ತು ವಯೊಲಿನ್ ಜುಗಲ್‍ಬಂದಿ ತಂದು ಗೆದ್ದಿರೋ ಅನೂಪ್ ಆ ಹಾಡಿನಲ್ಲಿ ತುಳು ಪದಗಳನ್ನೂ ಚೆಂದವಾಗಿ ಬಳಸಿಕೊಂಡಿದ್ದಾರೆ.