ಇದು ಹೊಸಬರ ಸಿನಿಮಾ. ಚಿತ್ರದ ಹೆಸರು ಡಿಎಡಿ. ಹಾಗಂತ ಡ್ಯಾಡ್ ಎಂದು ಓದಿಕೊಳ್ಳಬೇಡಿ. ಇದರ ಅರ್ಥ ದೇವರಾಜ್ ಅಲಿಯಾಸ್ ಡೇವಿಡ್. ವಿಶಾಲ್, ಚಿರಾಗ್, ಸಾಯಿ ಮಂಜುನಾಥ್, ಮಹಿಕಾ ಪಾತ್ರಧಾರಿಗಳು. ಹೊಸಬರು. ಆದರೆ.. ಹಾಡು ಮಾತ್ರ ಯೂಥ್ ಫುಲ್ಲಾಗಿದೆ.
ಅರ್ಜುನ್ ಕೃಷ್ಣ ಬರೆದಿರೋ ಹಾಡಿಗೆ ವಾಸುಕಿ ವೈಭವ್ ಚೆಂದದ ಧ್ವನಿ ಕೊಟ್ಟಿದ್ದಾರೆ. ಅರ್ಜುನ್ ಸೇಠ್ ಮ್ಯೂಸಿಕ್ಕು. ಕೊಲ್ತಿಯಾ.. ಕೊಲ್ತಿಯಾ ಅನ್ನೋ ಹಾಡು.. ಕಾಲೇಜಿನಲ್ಲಿ ಕಂಡ ಹುಡುಗಿಯನ್ನು ಪ್ರೀತಿಸಿ.. ಪಟಾಯಿಸುವ ಪ್ರಯತ್ನದಲ್ಲಿದ್ದಾಗ.. ಅವಳು ಕೈಕೊಟ್ಟು ಹೋಗುವ ಒಂದಿಡೀ ಕಥೆಯನ್ನು ಒಂದು ಹಾಡಿನಲ್ಲಿ ತೋರಿಸಿದ್ದಾರೆ ನಿರ್ದೇಶಕ ಮತ್ತು ಈ ಹಾಡಿನ ಬರಹಗಾರ ಹಾಗೂ ನಿರ್ಮಾಪಕರೂ ಆಗಿರುವ ಅರ್ಜುನ್ ಕೃಷ್ಣ.