ಚಿತ್ರರಂಗದಲ್ಲಿ ವಿಶೇಷ ದಾಖಲೆ ಬರೆದ ಸಿನಿಮಾ 777 ಚಾರ್ಲಿ. ಜೂನ್ 10ಕ್ಕೆ ರಿಲೀಸ್ ಆಗಿದ್ದ ಚಾರ್ಲಿ ಬಾಕ್ಸಾಫೀಸ್‍ನಲ್ಲಿ ಮೋಡಿ ಮಾಡಿದೆ. 150 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದೆ. 50ನೇ ಸಮೀಪಿಸುತ್ತಿರುವಾಗಲೇ ಒಟಿಟಿ ರಿಲೀಸ್`ಗೆ ಡೇಟ್ ಫಿಕ್ಸ್ ಆಗಿದೆ.
ರಕ್ಷಿತ್ ಶೆಟ್ಟಿ ಅವರೇ ಪರಂವಾ ಸ್ಟುಡಿಯೋಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದ 777 ಚಾರ್ಲಿ, ಕಲೆಕ್ಷನ್ ವಿಚಾರದಲ್ಲಿ ಡಬಲ್ ಖುಷಿ ಕೊಟ್ಟಿದೆ. ಪ್ರೇಕ್ಷಕರ ಮೆಚ್ಚುಗೆಯ ವಿಚಾರದಲ್ಲೂ ಚಾರ್ಲಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಚಿತ್ರದ ಗೆಲುವಿನ ಎಲ್ಲ ಕ್ರೆಡಿಟ್‍ನ್ನೂ ರಕ್ಷಿತ್ ಶೆಟ್ಟಿ ನಿರ್ದೇಶಕ ಕಿರಣ್ ರಾಜ್ ಅವರಿಗೆ ಕೊಟ್ಟಿದ್ದಾರೆ. ಚಿತ್ರತಂಡಕ್ಕೆ ಲಾಭಾಂಶದ ಶೇ.10ರಷ್ಟು ಪಾಲು ಘೋಷಿಸಿದ್ದಾರೆ. ಇದೆಲ್ಲ ಸಂಭ್ರಮದ ನಡುವೆ 777 ಚಾರ್ಲಿ ಜುಲೈ 29ಕ್ಕೆ ವೂಟ್‍ನಲ್ಲಿ ರಿಲೀಸ್ ಆಗುತ್ತಿದೆ.