ಧ್ರುವ ಸರ್ಜಾ ಮತ್ತು ಎ.ಪಿ.ಅರ್ಜುನ್ ಕಾಂಬಿನೇಷನ್ ಸಿನಿಮಾ ಮಾರ್ಟಿನ್. ಚಿತ್ರೀಕರಣ ಮುಕ್ತಾಯದ ಹಂತದಲ್ಲಿದೆ. ಅದ್ಧೂರಿ ನಂತರ ಅರ್ಜುನ್ ಮತ್ತೊಮ್ಮೆ ಧ್ರುವ ಸರ್ಜಾಗೆ ಆ್ಯಕ್ಷನ್ ಕಟ್ ಹೇಳುತ್ತಿರೋ ಸಿನಿಮಾ ಮಾರ್ಟಿನ್. ಧ್ರುವ ಸರ್ಜಾರನ್ನು ಲಾಂಚ್ ಮಾಡಿದ್ದವರು ಕೂಡಾ ಅರ್ಜುನ್. ಇವರಿಬ್ಬರೂ ಮತ್ತೊಮ್ಮೆ ಒಂದಾಗಿರೋ ಸಿನಿಮಾ ಮಾರ್ಟಿನ್, ಪ್ಯಾನ್ ಇಂಡಿಯಾ ಸಿನಿಮಾ ಆಗಿ ರೂಪುಗೊಳ್ಳುತ್ತಿದೆ.
ಚಿತ್ರದಲ್ಲಿನ ಎರಡು ಫೈಟಿಂಗ್ ಮತ್ತು ಚೇಸಿಂಗ್ ಸೀನ್ ಬ್ಯಾಲೆನ್ಸ್ ಇದೆ. ಎರಡು ಹಾಡುಗಳ ಶೂಟಿಂಗ್ ಆಗಬೇಕಿದೆ. ಶೀಘ್ರದಲ್ಲೇ ಶೂಟಿಂಗ್ ಶುರುವಾಗಲಿದೆ. ಒಂದು ಫೈಟ್ ಸೀಕ್ವೆನ್ಸ್‍ನ್ನ ರಾಮ್-ಲಕ್ಷ್ಮಣ್ ಕಂಪೋಸ್ ಮಾಡುತ್ತಿದ್ದಾರೆ. ಮತ್ತೊಂದು ಸೀಕ್ವೆನ್ಸ್‍ನ ರವಿವರ್ಮ ಮಾಸ್ಟರ್ ಮಾಡಲಿದ್ದಾರೆ ಎಂದು ಮಾಹಿತಿ ಕೊಟ್ಟಿರೋದು ಎ.ಪಿ.ಅರ್ಜುನ್.
ವೈಭವಿ ಶಾಂಡಿಲ್ಯ ನಾಯಕಿಯಾಗಿರೋ ಚಿತ್ರ ಸೆಪ್ಟೆಂಬರ್‍ನಲ್ಲಿ ರಿಲೀಸ್ ಡೇಟ್ ಘೋಷಿಸಿತ್ತು. ರಿಲೀಸ್ ಡೇಟ್ ಮುಂದೆ ಹೋಗಲಿದೆ ಎಂಬ ಸುದ್ದಿಯಿದೆ. ಆದರೆ ಅದನ್ನು ಮಾರ್ಟಿನ್ ತಂಡ ಅಧಿಕೃತವಾಗಿ ಹೇಳಿಲ್ಲ.