ವಿಕ್ರಾಂತ್ ರೋಣ ಚಿತ್ರದ ನಾಲ್ಕನೇ ಹಾಡು ಇದು. ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣನ ಬಗ್ಗೆ ದಿನೇ ದಿನೇ ಕುತೂಹಲ ಹೆಚ್ಚುತ್ತಲೇ ಹೋಗುತ್ತಿದೆ. ಚಿತ್ರದ ಮೊದಲ ಕುತೂಹಲವೇ ಗುಮ್ಮ. ಏನಿದು ಗುಮ್ಮ ಎಂಬ ಕುತೂಹಲ ಹುಟ್ಟಿಸಿಯೇ ಚಿತ್ರದ ಬಗ್ಗೆ ಕ್ರೇಜ್ ಹೆಚ್ಚಿಸಿದ್ದ ಅನೂಪ್ ಭಂಡಾರಿ ಈಗ ಚಿತ್ರದ 4ನೇ ಹಾಡಿನ ಲಿರಿಕಲ್ ವಿಡಿಯೋ ಬಿಟ್ಟಿದ್ದಾರೆ.
ದ ಡೆವಿಲ್ಸ್ ಫ್ಯುರಿ ಹೆಸರಿನ ಈ ಹಾಡು ವಿಕ್ರಾಂತ್ ರೋಣ ಚಿತ್ರದ ಥೀಮ್ ಸಾಂಗ್ ಕೂಡಾ. ಅಜನೀಶ್ ಲೋಕನಾಥ್ ಸಂಗೀತದ ಹಾಡಿಗೆ ಸಾಹಿತ್ಯ ನಿರ್ದೇಶಕ ಅನೂಪ್ ಭಂಡಾರಿ ಅವರದ್ದೇ. ಅನೂಪ್, ಅಜನೀಶ್ ಕೂಡಾ ಹಾಡುಗಾರರ ಲಿಸ್ಟಿನಲ್ಲಿದ್ದು, ದೀಪಕ್ ಬ್ಲೂ ಮತ್ತು ಹರ್ಷಿಕಾ ವೇದಾಂತ್ ಹಾಡಿಗೆ ದನಿಗೂಡಿಸಿದ್ದಾರೆ.
ಈಗಾಗಲೇ ರಾರಾ ರಕ್ಕಮ್ಮ, ರಾಜಕುಮಾರಿ, ಹೇ ಫಕೀರ ಹಾಡುಗಳು ಕ್ರೇಜ್ ಹುಟ್ಟುಹಾಕಿವೆ. ಈಗ ಗುಮ್ಮನ ಟೈಮು.
ರಂಗಿತರಂಗ ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಚಿತ್ರಕ್ಕೆ ಬಂಡವಾಳ ಹೂಡಿರೋದು ಜಾಕ್ ಮಂಜು. ನಿರೂಪ್ ಭಂಡಾರಿ, ನೀತು ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್ ಕೂಡಾ ನಟಿಸಿರೋ ಚಿತ್ರ ಜುಲೈ 28ಕ್ಕೆ ರಿಲೀಸ್ ಆಗಲಿದೆ. ಇನ್ನೊಂದೇ ಒಂದು ವಾರ.. ಗುಮ್ಮನ್ನ ನೋಡೇಬಿಡೋಣ...