` ಲೈಗರ್ ಸಾಲಾ ಕ್ರಾಸ್ ಬೀಡ್ ಬರ್ತಾವ್ನೆ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಲೈಗರ್ ಸಾಲಾ ಕ್ರಾಸ್ ಬೀಡ್ ಬರ್ತಾವ್ನೆ..
Liger Movie Image

ಲೈಗರ್ ಅಂದ್ರೇನೇ ಕ್ರಾಸ್ ಬೀಡ್. ಟೈಗರ್ ಮತ್ತು ಲಯನ್ ಎರಡೂ ಒಟ್ಟಿಗೇ ಸೇರಿ ಜನಿಸುವ ಪ್ರಾಣಿಯನ್ನು ಟೈಗರ್ ಮತ್ತು ಲಯನ್ ಎರಡನ್ನೂ ಸೇರಿಸಿ ಲೈಗರ್ ಎನ್ನುತ್ತಾರೆ. ಅದನ್ನೇ ಟೈಟಲ್ ಆಗಿಟ್ಟುಕೊಂಡಿರೋದಷ್ಟೇ ಅಲ್ಲ, ಸಾಲಾ ಕ್ರಾಸ್ ಬೀಡ್ ಅನ್ನೋ ಟ್ಯಾಗ್ ಲೈನ್ ಇಟ್ಟುಕೊಂಡು ಬರ್ತಿದೆ ಲೈಗರ್ ಸಿನಿಮಾ.

ಇದು ಮೂಲತಃ ತೆಲುಗು ಸಿನಿಮಾ. ವಿಜಯ್ ದೇವರಕೊಂಡ ಹೀರೋ. ಕನ್ನಡದಲ್ಲಿ ಅಪ್ಪು, ಯುವರಾಜ ಚಿತ್ರಗಳನ್ನು ನಿರ್ದೇಶಿಸಿದ್ದ ಪುರಿ ಜಗನ್ನಾಥ್ ಡೈರೆಕ್ಟರ್. ಇದೇ ಮೊದಲ ಬಾರಿಗೆ ವಿಜಯ್ ದೇವರಕೊಂಡ ಪುರಿ ಚಿತ್ರದಲ್ಲಿ ನಟಿಸಿದ್ದಾರೆ.

ಚಿತ್ರದಲ್ಲಿ ವಿಜಯ್ ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರದುದ್ದಕ್ಕೂ ಅದ್ಭುತ ಮೈಕಟ್ಟು ತೋರಿಸಿದ್ದಾರೆ. ಅನನ್ಯಾ ಪಾಂಡೆ ಜೊತೆ ಮೈಬಿಸಿಯಾಗಿಸುವ ದೃಶ್ಯಗಳಿರೋ ಸೂಚನೆ ಟ್ರೇಲರಿನಲ್ಲೇ ಸಿಕ್ಕಿದೆ. ರಮ್ಯಾಕೃಷ್ಣ ಮತ್ತೊಮ್ಮೆ ಪವರ್ ಫುಲ್ ಅಮ್ಮನಾಗಿ ಕಾಣಿಸಿಕೊಂಡಿದ್ದಾರೆ. ಮೈಕ್ ಟೈಸನ್ ಕೂಡಾ ನಟಿಸಿರೋ ಚಿತ್ರಕ್ಕೆ ಪುರಿ ಜಗನ್ನಾಥ್, ಕರಣ್ ಜೋಹರ್, ಚಾರ್ಮಿ ಕೌರ್, ಅಪೂರ್ವ ಮೆಹ್ತಾ ನಿರ್ಮಾಪಕರು.