ಆ ಒಂದು ಫೋಟೋ : ನಯನತಾರಾಗೆ 25 ಕೋಟಿ ಲಾಸ್ ಸಾಧ್ಯತೆ ಅನ್ನೋ ಸುದ್ದಿ ಓದಿದ್ದೀರಲ್ಲ.. ಈಗ ಇದ್ದಕ್ಕಿದ್ದಂತೆ ಎಲ್ಲವೂ ಥಂಡ ಥಂಡಾ.. ನಿರೀಕ್ಷೆಯಂತೆಯೇ ಸುದ್ದಿಯಾಯ್ತು.. ಡೇಟೂ ಫಿಕ್ಸ್ ಆಯ್ತು.. ಈ ಸುದ್ದಿಯ ಕೊನೆಯಲ್ಲಿ ಚಿತ್ರಲೋಕ ಒಂದು ಸಂದೇಹ ವ್ಯಕ್ತಪಡಿಸಿತ್ತು. ಅ ವಾದ ಇಷ್ಟೆ..
ಮದುವೆ ಆಗಿ ತಿಂಗಳಾಗಿದೆ. ಇದ್ದಕ್ಕಿದ್ದಂತೆ ವಿಡಿಯೋ ಹಾಕಿಬಿಟ್ಟರೆ ಜನರಾದರೂ ಏಕೆ ನೋಡಬೇಕು. ಇದೊಂದಿಷ್ಟು ಸುದ್ದಿಯಾಗಿ ವಿವಾದವಾದರೆ ಹೆಚ್ಚು ಲಾಭ ಎನ್ನುವ ಸುದ್ದಿಯೂ ಇದೆ ಎಂದು ಊಹಿಸಿತ್ತು ಚಿತ್ರಲೋಕ. ಅದರಂತೆಯೇ ಆಗಿದೆ.
ನೆಟ್‍ಫ್ಲಿಕ್ಸ್‍ನಲ್ಲಿ ವಿಘ್ನೇಶ್ ಸಿವನ್ ಮತ್ತು ನಯನತಾರಾ ಲವ್ ಸ್ಟೋರಿಯ ಡಾಕ್ಯುಮೆಂಟರಿಯೇ ರಿಲೀಸ್ ಆಗಲಿದೆ. ತುಂಬಾ ದಿನ ಕಾಯಿಸೋದಿಲ್ಲ. ಸ್ಕ್ರಿಪ್ಟ್ ಇಲ್ಲದ ಕಂಟೆಂಟ್‍ಗೂ ಇಂಡಿಯಾದಲ್ಲಿ ಪ್ರೇಕ್ಷಕರಿದ್ದಾರೆ. ಗೌತಮ್ ವಾಸುದೇವನ್ ಮತ್ತು ರೋಡಿಸ್ ಪಿಕ್ಚರ್ಸ್ ಸಾಕ್ಷ್ಯಚಿತ್ರ ಸಿದ್ಧ ಮಾಡಿದ್ದಾರೆ ಎಂದಿದೆ ನೆಟ್‍ಫ್ಲಿಕ್ಸ್.
ಇಷ್ಟೆಲ್ಲ ಆಗಿಯೂ ಇನ್ನೂ ರಿಲೀಸ್ ಡೇಟ್‍ನ್ನ ಅಧಿಕೃತವಾಗಿ ಘೋಷಿಸಿಲ್ಲ. ಡಾಕ್ಯುಮೆಂಟರಿ ಟೈಟಲ್ ಕೂಡಾ ಹೇಳಿಲ್ಲ. ಇದು ಮದುವೆಯನ್ನೇ ಮಾರಿಕೊಂಡವರ ಕಥೆ.