ಒಂದು ಸಿನಿಮಾ ಪ್ರೇಕ್ಷಕರನ್ನು ಸೆಳೆಯೋಕೆ ಏನು ಮಾಡಬೇಕು? ಏನೂ ಮಾಡಬೇಕಿಲ್ಲ. ಒಳ್ಳೆಯ ಕಂಟೆಂಟ್ ಕೊಟ್ಟರೆ ಸಾಕು. ಅದನ್ನು ಜನ ನೋಡಿದರೆ.. ಚಿತ್ರವನ್ನು ಮೆಚ್ಚಿದರೆ ಅವರೇ ಚಿತ್ರವನ್ನು ಪ್ರಮೋಟ್ ಮಾಡುತ್ತಾರೆ. ಹಾಗೆ ಮೊದಲಿಗೆ ಬರುವ ಪ್ರೇಕ್ಷಕರನ್ನು ಕರೆತರುವಷ್ಟು ಪ್ರಚಾರವನ್ನಂತೂ ಮಾಡಲೇಬೇಕು. ಇಷ್ಟೆಲ್ಲ ಆದ ಮೇಲೆ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾದರೆ.. ಯಶಸ್ಸು ತಂತಾನೇ ಸಿಗುತ್ತಾ ಹೋಗುತ್ತೆ. ಚೇಸ್ ಚಿತ್ರಕ್ಕೂ ಅದೇ ಆಗಿದೆ.
ಚಿತ್ರಮಂದಿರದೊಳಕ್ಕೆ ಬಂದ ಪ್ರೇಕ್ಷಕರಿಗೆ ಕಣ್ಣು ಕಾಣದ ಪೊಲೀಸ್ ಅಧಿಕಾರಿಯೊಬ್ಬಳು ಸೈಕೋಪಾತ್ ಒಬ್ಬನನ್ನು ಹಿಡಿಯುವ ಸಾಹಸ ಥ್ರಿಲ್ ಕೊಟ್ಟಿದೆ. ಕಥೆಯನ್ನು ವಿಭಿನ್ನವಾಗಿ ಹೇಳಿರುವ ರೀತಿಯೂ ಪ್ರೇಕ್ಷಕರಿಗೆ ಇಷ್ಟವಾಗಿದೆ. ಕ್ಷಣ ಕ್ಷಣವೂ ಎದೆಯಲ್ಲೊಂದು ತಲ್ಲಣ ಸೃಷ್ಟಿಸುತ್ತಲೇ ನಾಯಕಿ ಗೆಲ್ಲುವ ಕಥೆ.. ಕಲಾವಿದರ ಅಭಿನಯ.. ಬಿಜಿಎಂ.. ಎಲ್ಲವೂ ಸಖತ್ತಾಗಿ ವರ್ಕೌಟ್ ಆಗಿದೆ. ಇದೆಲ್ಲದರ ಪರಿಣಾಮ 2ನೇ ವಾರಕ್ಕೆ ಚಿತ್ರಮಂದಿರಗಳ ಸಂಖ್ಯೆ, ಶೋಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಚೇಸ್ ಸಿನಿಮಾದ ಸಕ್ಸಸ್ ಸೀಕ್ರೆಟ್ ಮತ್ತು ಸಕ್ಸಸ್ ಸ್ಟೋರಿ ಇದೆ.
ನಿರ್ದೇಶಕ ವಿಲೋಕ್ ಶೆಟ್ಟಿ ಮೊದಲ ಪ್ರಯತ್ನದಲ್ಲಿಯೇ ತಾವು ಪ್ರತಿಭಾವಂತ ಎಂದು ತೋರಿಸಿದ್ದರೆ, ನಿರ್ಮಾಪಕ ಮನೋಹರ್ ಸುವರ್ಣ ಗೆಲುವಿನ ನಗೆ ಬೀರುತ್ತಿದ್ದಾರೆ. ಒಂದೊಂದು ದೃಶ್ಯವೂ ರೋಚಕವಾಗಿ ಮೂಡಿ ಬಂದಿರುವುದೇ ಪ್ರೇಕ್ಷಕರು ಇಷ್ಟೊಂದು ಥ್ರಿಲ್ ಆಗೋಕೆ ಕಾರಣ. ರಾಧಿಕಾ ನಾರಾಯಣ್, ಅರ್ಜುನ್ ಯೋಗಿ, ಶೀತಲ್ ಶೆಟ್ಟಿ, ಸುಶಾಂತ್ ಪೂಜಾರಿ.. ಎಲ್ಲರೂ ತಮ್ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಅದರಲ್ಲೂ ರಾಧಿಕಾ ನಾರಾಯಣ್ ಕಣ್ಣು ಕಾಣದ ಪೊಲೀಸ್ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಇದೆಲ್ಲದರ ಎಫೆಕ್ಟ್ ಚಿತ್ರಮಂದಿರಗಳ ಸಂಖ್ಯೆ ಮತ್ತು ಶೋಗಳ ಸಂಖ್ಯೆ ಹೆಚ್ಚಾಗಿರೋದು.
777 ಚಾರ್ಲಿ ಗೆಲುವಿನ ಜೋಷ್‍ನಲ್ಲಿದ್ದ ಕನ್ನಡ ಚಿತ್ರರಂಗಕ್ಕೆ ಇದು ಇನ್ನೊಂದು ಬೂಸ್ಟ್ ಕೊಟ್ಟಿದೆ.