ಚೇತನ್ ಕುಮಾರ್. ಇದೂವರೆಗೆ ಸೋಲನ್ನೇ ಕಾಣದ ನಿರ್ದೇಶಕ. ಭರ್ಜರಿ, ಬಹದ್ದೂರ್, ಭರಾಟೆ, ಜೇಮ್ಸ್.. ಎಲ್ಲವೂ ಸಕ್ಸಸ್`ಫುಲ್ ಚಿತ್ರಗಳೇ. ಜೇಮ್ಸ್ ನಂತರ ಮುಂದೇನು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಚೇತನ್ ಕುಮಾರ್ ಇಶಾನ್ ಅವರಿಗೆ ಹೊಸ ಸಿನಿಮಾ ಮಾಡುತ್ತಿದ್ದಾರೆ.
ಇಶಾನ್, ಸದ್ಯಕ್ಕೆ ರೆಮೋ ಚಿತ್ರ ಮುಗಿಸಿದ್ದಾರೆ. ಪವನ್ ಒಡೆಯರ್ ಗರಡಿಯಲ್ಲಿ ಪಳಗಿರುವ ಇಶಾನ್ ಈಗ ಮುಂದಿನ ಚಿತ್ರವನ್ನು ಚೇತನ್ ಗರಡಿಯಲ್ಲಿ ಮಾಡಲಿದ್ದಾರೆ. ಸದ್ಯಕ್ಕೆ ಗೊತ್ತಾಗಿರೋದು ಇಷ್ಟೆ. ಚಿತ್ರದ ಟೈಟಲ್, ಪ್ರೊಡ್ಯೂಸರ್, ತಂತ್ರಜ್ಞರು ಮತ್ತು ಇತರೆ ಕಲಾವಿದರ ವಿವರ.. ಎಲ್ಲವೂ ಹಂತ ಹಂತವಾಗಿ ಗೊತ್ತಾಗಲಿದೆ.