` ಆ ಒಂದು ಫೋಟೋ : ನಯನತಾರಾಗೆ 25 ಕೋಟಿ ಲಾಸ್..!? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಆ ಒಂದು ಫೋಟೋ : ನಯನತಾರಾಗೆ 25 ಕೋಟಿ ಲಾಸ್..!?
ಆ ಒಂದು ಫೋಟೋ : ನಯನತಾರಾಗೆ 25 ಕೋಟಿ ಲಾಸ್..!?

ಒಂದು ಫೋಟೋ ಅಥವಾ ವಿಡಿಯೋ ವ್ಯಾಲ್ಯೂ ಎಷ್ಟಿರಬಹುದು? ಅದು ಆಯಾಯ ವ್ಯಕ್ತಿ ಮತ್ತು ಬೇಡಿಕೆ ಮೇಲೆ ಡಿಸೈಡ್ ಆಗುತ್ತೆ. ಕೆಲವೊಂದು ಫೋಟೋ ಅಥವಾ ವಿಡಿಯೋ ಕಾಪಿರೈಟ್ಸ್‍ಗೆ ಕೋಟಿ ಕೋಟಿ ಸುರಿಯೋಕೂ ಕಂಪೆನಿಗಳು ಸಿದ್ಧವಾಗಿರುತ್ತವೆ. ಹೇಳಿ ಕೇಳಿ ಇದು ವಿಡಿಯೋಗಳ ಮೂಲಕವೇ ಹಣ ಗಳಿಸೋ ಕಾಲ. ಆದರೆ, ಇಂತಹ ಹೊತ್ತಲ್ಲಿ ನಯನತಾರಾ ಒಂದು ಫೋಟೋದಿಂದಾಗಿ 25 ಕೋಟಿ ಲಾಸ್ ಮಾಡಿಕೊಂಡ್ರು ಅನ್ನೋ ಸುದ್ದಿ ಓಡಾಡ್ತಾ ಇದೆ.

ಇತ್ತೀಚೆಗಷ್ಟೇ ನಯನತಾರಾ ತಮ್ಮ ಗೆಳೆಯ ನಿರ್ದೇಶಕ ವಿಘ್ನೇಶ್ ಸಿವನ್ ಜೊತೆ ಸಪ್ತಪದಿ ತುಳಿದಿದ್ದರು. ದೊಡ್ಡ ರೆಸಾರ್ಟ್‍ವೊಂದರಲ್ಲಿ ನಡೆದಿದ್ದ ಅದ್ಧೂರಿ ಮದುವೆ ಅದು. ವಿಚಿತ್ರವೇನು ಗೊತ್ತೇ.. ಮೂಲಗಳ ಪ್ರಕಾರ ಆ ಮದುವೆಗೆ ನಯನತಾರಾ ಆಗಲೀ, ವಿಘ್ನೇಶ್ ಆಗಲೀ ನಯಾಪೈಸೆ ಖರ್ಚು ಮಾಡಿರಲಿಲ್ಲ. ಒಟಿಟಿ ಕಂಪೆನಿಯೊಂದು ಇಡೀ ಮದುವೆಯ ಉಸ್ತುವಾರಿ ಮತ್ತು ವೆಚ್ಚವನ್ನೆಲ್ಲ ನೋಡಿಕೊಂಡಿತ್ತು. ಆ ಮದುವೆಯ ವಿಡಿಯೋವನ್ನು ತಮ್ಮ ಒಟಿಟಿಯಲ್ಲಿ ಪ್ರಸಾರ ಮಾಡಿ ಲಾಭ ಮಾಡಿಕೊಳ್ಳೋ ಉದ್ದೇಶ ಹೊಂದಿತ್ತು ಆ ಸಂಸ್ಥೆ. ಆದರೆ ಈಗ ಮದುವೆಯ ಇಡೀ ವೆಚ್ಚವನ್ನು ನಿವೇ ಕೊಡಿ, ನಿಮ್ಮ ಮದುವೆ ವಿಡಿಯೋ ನಮಗೆ ಬೇಡ ಎನ್ನುತ್ತಿದೆಯಂತೆ ಆ ಸಂಸ್ಥೆ.

ಆಗಿದ್ದು ಇಷ್ಟೆ, ಮದುವೆಗೆ ರಜನಿಕಾಂತ್ ಬಂದಿದ್ದರು. ಶಾರೂಕ್ ಖಾನ್ ಬಂದಿದ್ದರು. ನಿರ್ದೇಶಕ ಅಟ್ಲೀ ಕೂಡಾ ಹೋಗಿದ್ದರು. ಹೀಗೆ ಮದುವೆಗೆ ಹೋದ ಸೆಲಬ್ರಿಟಿಗಳ ಫೋಟೋ ಮತ್ತು ಖುದ್ದು ನಯನತಾರಾ ಅವರೇ ತಮ್ಮ ಪೇಜ್‍ನಲ್ಲಿ ಹಾಕಿಕೊಂಡ ಮದುವೆ ಫೋಟೋ ಒಟಿಟಿ ಸಂಸ್ಥೆಗೆ ಇಷ್ಟವಾಗಿಲ್ಲ. ಒಪ್ಪಂದದ ಪ್ರಕಾರ ಒಂದೇ ಒಂದು ಫೋಟೋವನ್ನೂ ಕೂಡಾ ಹೊರಗೆ ಬಿಡುವ ಹಾಗಿರಲಿಲ್ಲವಂತೆ. ಹೀಗಾಗಿ ಸಂಸ್ಥೆ ಮದುವೆ ವಿಡಿಯೋ ನೀವೇ ಇಟ್ಟುಕೊಳ್ಳಿ, ನಾವು ಖರ್ಚು ಮಾಡಿದ ಹಣ ನಮಗೆ ಕೊಟ್ಟುಬಿಡಿ ಎನ್ನುತ್ತಿದೆಯಂತೆ.

ಇನ್ನೂ ಒಂದು ವಾದವಿದೆ. ಮದುವೆ ಆಗಿ ತಿಂಗಳಾಗಿದೆ. ಇದ್ದಕ್ಕಿದ್ದಂತೆ ವಿಡಿಯೋ ಹಾಕಿಬಿಟ್ಟರೆ ಜನರಾದರೂ ಏಕೆ ನೋಡಬೇಕು. ಇದೊಂದಿಷ್ಟು ಸುದ್ದಿಯಾಗಿ ವಿವಾದವಾದರೆ ಹೆಚ್ಚು ಲಾಭ ಎನ್ನುವ ಸುದ್ದಿಯೂ ಇದೆ.

ಒಟ್ಟಿನಲ್ಲೀಗ ಮನೆ ಕಟ್ಟಿ ನೋಡು.. ಮದುವೆ ಮಾಡಿ ನೋಡು ಅನ್ನೋ ಗಾದೆಗೆ ಮದುವೆ ವಿಡಿಯೋ ಮಾರಾಟ ಮಾಡಿ ನೋಡು ಅನ್ನೋದು ಹೊಸ ಸೇರ್ಪಡೆ..