ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಷ್. ಆಕೆ ನಟಿಸಿದ ಚಿತ್ರಗಳು ಬಾಕ್ಸಾಫೀಸ್‍ನಲ್ಲಿ ಗೆದ್ದಿದ್ದೇ ಹೆಚ್ಚು. ಕಿರಿಕ್ ಪಾರ್ಟಿಯಿಂದ ಶುರುವಾದ ಸಕ್ಸಸ್ ಜರ್ನಿ.. ಮೊನ್ನೆ ಮೊನ್ನೆ ಹಿಟ್ ಆದ ಪುಷ್ಪದವರೆಗೂ ನಾನ್ ಸ್ಟಾಪ್. ಗೀತಗೋವಿಂದಂ, ಸರಿಲೇರು ನೀಕೆವ್ವರು, ಸುಲ್ತಾನ್, ಪುಷ್ಪ.. ಹೀಗೆ ಬೆನ್ನು ಬೆನ್ನಿಗೆ ಹಿಟ್ ಆದ ಚಿತ್ರಗಳು. ದಕ್ಷಿಣದಲ್ಲಿ ರಕ್ಷಿತ್ ಶೆಟ್ಟಿಯಿಂದ ಶುರುವಾದ ಜರ್ನಿ ಅಪ್ಪು, ಧ್ರುವ ಸರ್ಜಾ, ವಿಜಯ್ ದೇವರಕೊಂಡ, ಮಹೇಶ್ ಬಾಬು, ಅಲ್ಲು ಅರ್ಜುನ್, ಕಾರ್ತಿ, ಅಜಿತ್, ಚಿಯಾನ್ ವಿಕ್ರಂ.. ಹೀಗೆ ಸ್ಟಾರ್‍ಗಳ ಜೊತೆಯಲ್ಲಿ ನಟಿಸಿ ಗೆದ್ದರು. ಈಗ ಅಮಿತಾಭ್ ಜೊತೆ ಹಿಂದಿಯಲ್ಲೂ ನಟಿಸುತ್ತಿದ್ದಾರೆ. ಇದೆಲ್ಲದಕ್ಕೂ ಕಾರಣ ರಶ್ಮಿಕಾ ಅವರ ಅಪ್ರೋಚ್, ಡೆಡಿಕೇಷನ್ ಮತ್ತು ಆಕ್ಟಿಂಗ್ ಎಂದು ಅಂದುಕೊಂಡರೆ ಅದು ತಪ್ಪು. ಅದಕ್ಕೆಲ್ಲ ನಾನೇ ಕಾರಣ ಎಂದು ಇಲ್ಲೊಬ್ಬ ಸ್ವಾಮೀಜಿ ಹೇಳಿದ್ದಾನೆ.
ಈತನ ಹೆಸರು ವೇಣು ಸ್ವಾಮಿ. ತೆಲಂಗಾಣದವನು. ಭವಿಷ್ಯ ಹೇಳೋದೇ ಇವನ ಕಾಯಕ. ಈತ ರಶ್ಮಿಕಾ ಬಗ್ಗೆ ಅಷ್ಟೇ ಅಲ್ಲ, ನಯನತಾರಾ, ಸಮಂತಾ, ಪವನ್ ಕಲ್ಯಾಣ್, ಸಾಯಿ ಪಲ್ಲವಿ.. ಹೀಗೆ ಎಲ್ಲರ ಬಗ್ಗೆಯೂ ಭವಿಷ್ಯ ಹೇಳ್ತಾನೆ. ರಶ್ಮಿಕಾ ಅವರ ಬಗ್ಗೆಯೂ ಇದೇ ರೀತಿ ಹೇಳಿದ್ದಾನೆ.
ರಶ್ಮಿಕಾ ಮಂದಣ್ಣಗೆ ಹಳೆಯ ಅಫೇರ್ ಮರೆತರೆ ಸ್ಟಾರ್ ಆಗುವ ಯೋಗವಿದೆ ಎಂದಿದ್ದೆ. ಹಾಗೆಯೇ ರಶ್ಮಿಕಾ ಮಂದಣ್ಣ ಹಳೆಯ ಬಾಯ್ ಫ್ರೆಂಡ್‍ನ್ನು ಬಿಟ್ಟರು. ದೊಡ್ಡ ಮಟ್ಟದ ನಾಯಕಿಯಾದರು ಎಂದಿರುವ ವೇಣು ಸ್ವಾಮಿ 2024ರವರೆಗೂ ರಶ್ಮಿಕಾ ಅವರ ಸಿನಿಲೈಫ್ ಏರುಗತಿಯಲ್ಲಿರುತ್ತೆ. ನಂತರ ಕುಸಿಯುತ್ತೆ ಎಂದಿದ್ದಾರೆ.
ಅಷ್ಟೇ ಅಲ್ಲ, ಕರ್ನಾಟಕದಲ್ಲಿ ರಶ್ಮಿಕಾ ಮಂದಣ್ಣ ಎಂಪಿಯಾಗಲಿದ್ದಾರೆ. ಅದೂ ಕಾಂಗ್ರೆಸ್‍ನಿಂದಲೇ ರಾಜಕೀಯಕ್ಕೆ ಇಳಿದು ಸಂಸದೆಯಾಗಲಿದ್ದಾರಂತೆ. ನಟಿ ರಮ್ಯಾ ರೀತಿಯಲ್ಲೇ ರಶ್ಮಿಕಾ ಕುಡಾ ಕರ್ನಾಟಕದ ನಾಯಕಿಯಾಗಲಿದ್ದಾರಂತೆ..
ಏನೋ.. ಎಂತೋ.. ಒಟ್ಟಿನಲ್ಲಿ ರಶ್ಮಿಕಾ ಮನೆಯಲ್ಲಿ ಈ ವೇಣು ಸ್ವಾಮಿ ಪೂಜೆ ಮಾಡಿಸಿರುವುದಂತೂ ಸತ್ಯ.