` ಕಿಚ್ಚವರ್ಸ್ ಎಂಬ ಹೊಸ ಜಗತ್ತು.. : ಏನಿದು? ಯಾರೆಲ್ಲ ರೆಡಿ ಇದ್ದೀರಿ? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕಿಚ್ಚವರ್ಸ್ ಎಂಬ ಹೊಸ ಜಗತ್ತು.. : ಏನಿದು? ಯಾರೆಲ್ಲ ರೆಡಿ ಇದ್ದೀರಿ?
Kiccha Sudeep

ವಿಕ್ರಾಂತ್ ರೋಣ ಒಂದರ ಹಿಂದೊಂದು ದಾಖಲೆಗಳನ್ನು ಸೃಷ್ಟಿಸುತ್ತಲೇ ಹೊರಟಿದೆ. ರಿಲೀಸ್ ಆಗುವುದಕ್ಕೂ ಮೊದಲೇ ದಾಖಲೆ ಬರೆಯುತ್ತಿರೋ ವಿಕ್ರಾಂತ್ ರೋಣ ಸಿನಿ ಡಬ್ ಆ್ಯಪ್ ಮೂಲಕ ವಿಶ್ವಮಟ್ಟದಲ್ಲೇ ದಾಖಲೆ ಬರೆಯುತ್ತಿದೆ. ಇದರ ಜೊತೆಯಲ್ಲೇ ಕಿಚ್ಚವರ್ಸ್ ಅನ್ನೋ ಕಾನ್ಸೆಪ್ಟ್ ಪರಿಚಯಿಸುತ್ತಿದೆ ವಿಕ್ರಾಂತ್ ರೋಣ ತಂಡ.

ಏನಿದು ಕಿಚ್ಚವರ್ಸ್?

ಇದೊಂದು ಡಿಜಿಟಲ್ ಜಗತ್ತು. ಎನ್‍ಎಫ್‍ಟಿ ಸಂಸ್ಥೆ ಇದನ್ನು ಸೃಷ್ಟಿಸಿದೆ. ಇಲ್ಲಿ ನೀವು kichchavers.io ನಲ್ಲಿ ಆಪ್ ಡೌನ್ ಲೋಡ್ ಮಾಡಿಕೊಳ್ಳಿ. ವಿಕ್ರಾಂತ್ ರೋಣನ ಸ್ಕೆಚ್ ಬಿಡಿಸಿ. ಇದೊಂದು ವರ್ಚುವಲ್ ಜಗತ್ತು. ಈ ಜಗತ್ತಿಗೆ ಎಂಟ್ರಿ ಕೊಡೋಕೆ ನೀವು ಕಿಚ್ಚವರ್ಸ್ ಮೆಂಬರ್ ಆಗಿರಬೇಕು. ಮೆಂಬರ್ ಆಗೋದು ಹೇಗೆ? ಹಣ ಎಷ್ಟು ಅನ್ನೋ ವಿವರ ಆಪ್‍ನಲ್ಲೇ ಸಿಗಲಿದೆ. ಜುಲೈ 24ರ ನಂತರ. ಅಲ್ಲದೆ ಜುಲೈ 27ರಂದು ದುಬೈನಲ್ಲಿ ಪ್ರೀಮಿಯರ್ ಇದೆ. ಅಲ್ಲಿಗೆ ಹೋಗಿ ನೀವು ಸಿನಿಮಾ ನೋಡಬಹುದು.

ಸುದೀಪ್ ಸದಾ ಹೊಸ ಹೊಸದನ್ನೇನಾದರೂ ಮಾಡೋ ಸಾಹಸ ಮಾಡ್ತಾನೇ ಇರ್ತಾರೆ. ಅಂತಹ ಸಾಹಸಗಳಿಂದಲೇ ಸುದೀಪ್ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಟೂರ್ನಿ ನಡೆಸಿದ್ದು. ಕನ್ನಡ ಚಿತ್ರವನ್ನು ಇಂಗ್ಲಿಷ್‍ನಲ್ಲಿ ಡಬ್ ಮಾಡಿಸಿರುವುದು. ಬೇರೆ ಬೇರೆ ಭಾಷೆಗಳ  ದೊಡ್ಡ ದೊಡ್ಡ ಕಲಾವಿದರನ್ನು ಕನ್ನಡಕ್ಕೆ ಕರೆತಂದಿದ್ದು. ಸಿನಿ ಡಬ್ ಆಪ್ ಪರಿಚಯಿಸುತ್ತಿರುವುದು. ಬುರ್ಜ್ ಖಲೀಫಾ ಮೇಲೆ ಕನ್ನಡ ಬಾವುಟ ಹಾರಿಸಿದ್ದು. ಮುಂಬೈನಲ್ಲಿ ಕಟೌಟ್ ನಿಲ್ಲಿಸಿದ್ದು. ಈಗ ವಿಕ್ರಾಂತ್ ರೋಣ ಮೂಲಕ ಇನ್ನಷ್ಟು ಮತ್ತಷ್ಟು ಹೊಸತನಗಳನ್ನು ಸೃಷ್ಟಿಸುತ್ತಿದ್ದಾರೆ.

ಸುದೀಪ್ ಅವರ ಕನಸಿಗೆ ರೆಕ್ಕೆಪುಕ್ಕ ಕಟ್ಟಿರುವುದು ಜಾಕ್ ಮಂಜು. ಸುದೀಪ್ ಅವರ ಗೆಳೆಯನಷ್ಟೇ ಅಲ್ಲ, ಈ ಚಿತ್ರದ ನಿರ್ಮಾಪಕರೂ ಕೂಡಾ. ಅನೂಪ್ ಭಂಡಾರಿ ನಿರ್ದೇಶಿಸಿರುವ 3ಡಿ ಸಿನಿಮಾ ಜುಲೈ 28ಕ್ಕೆ ರಿಲೀಸ್ ಆಗುತ್ತಿದೆ.