` ಪ್ರಜ್ವಲ್ ಅಬ್ಬರಕ್ಕೆ ಕೂಡಿ ಬಂತು ಕಾಲ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಪ್ರಜ್ವಲ್ ಅಬ್ಬರಕ್ಕೆ ಕೂಡಿ ಬಂತು ಕಾಲ
Abbara Movie Image

ಪ್ರಜ್ವಲ್ ದೇವರಾಜ್ ಅಬ್ಬರದಿಂದಲೇ 2022ರನ್ನು ಶುರು ಮಾಡಲಿದ್ದಾರೆ. 6 ತಿಂಗಳು ಕಳೆದ ಮೇಲೆ ಏನು ಶುರು ಮಾಡೋದು ಅನ್ನಬೇಡಿ. ಆಗಸ್ಟ್‍ನಲ್ಲಿ ರಿಲೀಸ್ ಆಗುತ್ತಿರೋ ಅಬ್ಬರ ಪ್ರಜ್ವಲ್ ಅವರ ಈ ವರ್ಷದ ಮೊದಲ ಸಿನಿಮಾ. ಕೆ.ರಾಮನಾರಾಯಣ್ ನಿರ್ದೇಶನದ ಅಬ್ಬರ ಆಗಸ್ಟ್ 12ರಂದು ರಿಲೀಸ್ ಆಗುತ್ತಿದೆ.

ಪ್ರಜ್ವಲ್ ಈ ಚಿತ್ರದಲ್ಲಿ ಹಲವು ಶೇಡ್`ಗಳಲ್ಲಿ ನಟಿಸಿದ್ದು, ಮೂವರು ನಾಯಕಿಯರಿದ್ದಾರೆ. ನಿಮಿಕಾ ರತ್ನಾಕರ್, ಲೇಖಾ ಚಂದ್ರ ಮತ್ತು ರಾಜ್‍ಶ್ರೀ. ರವಿಶಂಕರ್, ಶೋಭರಾಜ್, ಕೋಟೆ ಪ್ರಭಾಕರ್ ಖಳನಾಯಕರು. ಚಿತ್ರಕ್ಕಾಗಿ ರವಿ ಬಸ್ರೂರು 6 ಹಾಡುಗಳನ್ನು ಸಂಯೋಜಿಸಿದ್ದಾರೆ.

ಅಬ್ಬರದ ಬೆನ್ನಲ್ಲೇ ಪ್ರಜ್ವಲ್ ದೇವರಾಜ್ ಅವರ ವೀರಂ, ಗಣ, ಮಾಫಿಯಾ.. ಹೀಗೆ ಸಾಲು ಸಾಲು ಚಿತ್ರಗಳು ಕ್ಯೂನಲ್ಲಿವೆ.