` ಪುಟ್ಟಪರ್ತಿ ಸಾಯಿಬಾಬಾ ಚಿತ್ರ ಘೋಷಣೆ : ಸಾಯಿಪ್ರಕಾಶ್ ನಿರ್ದೇಶಕ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಪುಟ್ಟಪರ್ತಿ ಸಾಯಿಬಾಬಾ ಚಿತ್ರ ಘೋಷಣೆ : ಸಾಯಿಪ್ರಕಾಶ್ ನಿರ್ದೇಶಕ
Puttabarthi Satya Sai Baba

ಸಾಯಿಪ್ರಕಾಶ್ ಸಾಯಿಬಾಬಾ ಭಕ್ತರು. ಶಿರಡಿ ಸಾಯಿಬಾಬಾ ಮತ್ತು ಪುಟ್ಟಪರ್ತಿ ಸಾಯಿಬಾಬಾ ಇಬ್ಬರ ಭಕ್ತರೂ ಹೌದು. 1993ರಲ್ಲಿ ಶಿರಡಿ ಸಾಯಿಬಾಬಾ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದ ಸಾಯಿ ಪ್ರಕಾಶ್, ಸ್ವತಃ ಸಾಯಿಬಾಬಾ ಪಾತ್ರದಲ್ಲಿ ನಟಿಸಿದ್ದರೂ ಕೂಡಾ. ಈಗ ಪುಟ್ಟಪರ್ತಿ ಸಾಯಿಬಾಬಾ ಅವರ ಜೀವನ ಚರಿತ್ರೆಯನ್ನು ಸಿನಿಮಾ ಮಾಡಲು ಮುಂದಾಗಿದ್ದಾರೆ. ಇದು ಸಾಯಿಯವರ 100ನೇ ಚಿತ್ರವೂ ಹೌದು. ಚಿತ್ರಕ್ಕೆ ಶ್ರೀ ಸತ್ಯ ಸಾಯಿ ಅವತಾರ ಎಂಬ ಟೈಟಲ್ ಘೋಷಿಸಿದ್ದಾರೆ.

ಸತ್ಯ ಸಾಯಿಬಾಬಾ ಪಾತ್ರಕ್ಕೆ ಸೂಕ್ತ ಪ್ರತಿಭೆಯ ಹುಡುಕಾಟದಲ್ಲಿದ್ದೇವೆ. ಬೆಂಗಳೂರು ಮತ್ತು ಪುಟ್ಟಪರ್ತಿಯಲ್ಲಿ ಐದಾರು ಶೆಡ್ಯೂಲ್`ನಲ್ಲಿ ಶೂಟಿಂಗ್ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ ಸಾಯಿಪ್ರಕಾಶ್. ಹಲವು ಸಾಯಿ ಭಕ್ತರೇ ಚಿತ್ರದ ನಿರ್ಮಾಪಕರು.

ಕಾರ್ಯಕ್ರಮಕ್ಕೆ ಬಂದಿದ್ದ ಮಾಜಿ ಸಿಎಂ ಎಸ್.ಎಂ.ಕೃಷ್ಣ ತಮ್ಮ ಕಷ್ಟದ ದಿನಗಳಲ್ಲಿ ಸತ್ಯ ಸಾಯಿಬಾಬಾ ತಮಗೆ ನೀಡಿದ್ದ ಆತ್ಮಸ್ಥೈರ್ಯವನ್ನು ನೆನಪಿಸಿಕೊಂಡರು. ಹಿರಿಯ ಸಾಹಿತಿ ದೊಡ್ಡ ರಂಗೇಗೌಡ, ಚೇಂಬರ್ ಅಧ್ಯಕ್ಷ ಭಾಮಾ ಹರೀಶ್, ಆನಂದ ಗುರೂಜಿ, ಶಾಸಕ ಶರವಣ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿದ್ದು ಚಿತ್ರಕ್ಕೆ ಶುಭ ಕೋರಿದರು.