` ವರಮಹಾಲಕ್ಷ್ಮಿ ಹಬ್ಬಕ್ಕೆ ರಾಘವೇಂದ್ರ ಸ್ಟೋರ್ಸ್ ಓಪನ್ ಆಗಲ್ಲ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ವರಮಹಾಲಕ್ಷ್ಮಿ ಹಬ್ಬಕ್ಕೆ ರಾಘವೇಂದ್ರ ಸ್ಟೋರ್ಸ್ ಓಪನ್ ಆಗಲ್ಲ
Raghavendra Stores Movie Image

ಆಗಸ್ಟ್ 05ಕ್ಕೆ ವರಮಹಾಲಕ್ಷ್ಮಿ. ಆ ದಿನವೇ ರಾಘವೇಂದ್ರ ಸ್ಟೋರ್ಸ್ ರಿಲೀಸ್ ಡೇಟ್ ಘೋಷಣೆಯಾಗಿತ್ತು. ಹೊಂಬಾಳೆ-ಜಗ್ಗೇಶ್-ಸಂತೋಷ್ ಆನಂದರಾಮ್ ಕಾಂಬಿನೇಷನ್ ಸಿನಿಮಾ ಎಂಬ ಕಾರಣಕ್ಕೆ ಭಾರಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ರಾಘವೇಂದ್ರ ಸ್ಟೋರ್ಸ್. ಆದರೆ ಇದ್ದಕ್ಕಿದ್ದಂತೆ ಹೊಂಬಾಳೆ ಫಿಲಮ್ಸ್ ಚಿತ್ರದ ಬಿಡುಗಡೆಯನ್ನು ಮುಂದೆ ಹಾಕಿದೆ.

ಇದ್ದಕ್ಕಿದ್ದಂತೆ ರಿಲೀಸ್ ಡೇಟ್ ಮುಂದೆ ಹೋಗೋಕೆ ಏನು ಕಾರಣ ಅನ್ನೋದು ಗೊತ್ತಿಲ್ಲ. ಟೆಕ್ನಿಕಲ್ ಪ್ರಾಬ್ಲಂ ಕಾಣಿಸಿದ್ದರೆ ಅದು ಸರಿ ಹೋಗೋವರೆಗೆ ಹೊಂಬಾಳೆ ಕಾಯುತ್ತೆ. ಆತುರ ಮಾಡುವುದಿಲ್ಲ ಅನ್ನೋದು ಗೊತ್ತಿರೋ ವಿಷಯ. ಜೊತೆಗೆ ಜಗ್ಗೇಶ್ ಈಗ ರಾಜ್ಯಸಭಾ ಸದಸ್ಯರೂ ಹೌದು. ಸಂಸತ್ ಕಲಾಪ ಶುರುವಾಗಿರುವ ಸಂದರ್ಭದಲ್ಲಿ ಜಗ್ಗೇಶ್ ಪ್ರಚಾರಕ್ಕೆ ಲಭ್ಯರಾಗದೇ ಹೋಗಬಹುದು. ಆದರೆ.. ಇದೇ ಕಾರಣಕ್ಕಾಗಿ ರಾಘವೇಂದ್ರ ಸ್ಟೋರ್ಸ್ ರಿಲೀಸ್ ಮುಂದೆ ಹೋಗಿದೆ ಅನ್ನೊದನ್ನ ಕರಾರುವಾಕ್ ಆಗಿ ಹೇಳೋಕೆ ಸಾಧ್ಯವಾಗುತ್ತಿಲ್ಲ.