` ನಿಶ್ವಿಕಾ ನಾಯ್ಡು ಮುತ್ತು ಕೊಟ್ಟು ಹೊಗೆ ಬಿಟ್ಟಿದ್ದು ಎಲ್ಲಿ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ನಿಶ್ವಿಕಾ ನಾಯ್ಡು ಮುತ್ತು ಕೊಟ್ಟು ಹೊಗೆ ಬಿಟ್ಟಿದ್ದು ಎಲ್ಲಿ..?
ನಿಶ್ವಿಕಾ ನಾಯ್ಡು ಮುತ್ತು ಕೊಟ್ಟು ಹೊಗೆ ಬಿಟ್ಟಿದ್ದು ಎಲ್ಲಿ..?

ನಿಶ್ವಿಕಾ ನಾಯ್ಡು. ಇದ್ದಕ್ಕಿದ್ದಂತೆ ಸುದ್ದಿಯಾಗಿದ್ದಾರೆ. ಅಮ್ಮ ಐ ಲವ್ ಯೂ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸುಂದರಿ ನಿಶ್ವಿಕಾ.. ಥೇಟು ಪಕ್ಕದ್ಮನೆ ಹುಡುಗಿ ಗೆಟಪ್‍ನಲ್ಲಿದ್ದವರು. ಸಾಂಪ್ರದಾಯಿಕ ಚೆಲುವೆ. ಈಗ ಸುದ್ದಿಯಾಗಿರೋದು ಮಾತ್ರ ಬೇರೆಯದೇ ಕಾರಣಕ್ಕೆ.

ನಿಶ್ವಿಕಾ ನಾಯ್ಡು ಗೋವಾದಲ್ಲಿನ ಪಬ್ ವೊಂದರಲ್ಲಿ ಹುಕ್ಕಾ ಹೊಡೆದಿದ್ದಾರೆ. ಅದೂ ಗೆಳತಿಯರ ಜೊತೆ. ಆ ಫೋಟೋ ಮತ್ತು ವಿಡಿಯೋ ವೈರಲ್ ಆಗಿದೆ. ಸ್ನೇಹಿತೆಯ ತುಟಿಗೆ ತುಟಿ ಕೊಟ್ಟು, ಮುತ್ತಿನ ಮತ್ತಿನಲ್ಲಿ ಗೆಳತಿಯ ಬಾಯಿಂದ ಹುಕ್ಕಾ ಹೊಗೆ ಎಳೆದುಕೊಂಡು ಹೊಗೆ ಬಿಡುವ ದೃಶ್ಯ ಕೆಲವರನ್ನು ಬೆಚ್ಚಿಬೀಳಿಸಿದೆ.

ಇದು ನಾಯಕಿಯರು ಹೀಗೆಯೇ ಇರಬೇಕು ಎನ್ನುವ  ಟಿಪಿಕಲ್ ಸಂಪ್ರದಾಯವಾದಿಗಳನ್ನು ಕೆರಳಿಸಿದ್ದರೆ.. ಅದು ಅವರ ಪರ್ಸನಲ್ ಲೈಫ್.. ವಾಟ್ಸ್ ದ ಪ್ರಾಬ್ಲಂ ಎನ್ನುವವರಿಗೇನೂ ಕೊರತೆಯಿಲ್ಲ. ನಿಶ್ವಿಕಾ ಅವರ ಪರ್ಸನಲ್ ಲೈಫ್‍ನ ವಿಡಿಯೋ, ಫೋಟೋ ಹೊರಬಿಡುವುದು ಕ್ರೈಂ. ಅದರಿಂದ ಸಮಾಜಕ್ಕೆ ಯಾವುದೇ ಹಾನಿಯಾಗಿಲ್ಲದೇ ಇರುವಾಗ ಅದು ಹೇಗೆ ತಪ್ಪಾಗುತ್ತೆ ಎಂದು ಪ್ರಶ್ನಿಸುವವರೂ ಇದ್ದಾರೆ.

ಸದ್ಯಕ್ಕೆ ನಿಶ್ವಿಕಾ ನಾಯ್ಡು ಗಾಳಿಪಟ 2 ಮತ್ತು ಗುರು ಶಿಷ್ಯರು ಚಿತ್ರದ ರಿಲೀಸ್`ನಲ್ಲಿ ತೊಡಗಿಸಿಕೊಂಡಿದ್ದಾರೆ.