` ರಕ್ಷಿತ್ ಶೆಟ್ಟಿ ಗ್ಯಾಂಗ್ ಹೊಸ ಚಿತ್ರಕ್ಕೆ ಪಂಚತಂತ್ರ ಹೀರೋ : ಬೆಳ್ಳಿಯಪ್ಪ ಡೈರೆಕ್ಟರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ರಕ್ಷಿತ್ ಶೆಟ್ಟಿ ಗ್ಯಾಂಗ್ ಹೊಸ ಚಿತ್ರಕ್ಕೆ ಪಂಚತಂತ್ರ ಹೀರೋ : ಬೆಳ್ಳಿಯಪ್ಪ ಡೈರೆಕ್ಟರ್
Vihaan Image

ಪಂಚತಂತ್ರ ಚಿತ್ರದ ಮೂಲಕ ಗಮನ ಸೆಳೆದಿದ್ದ ವಿಹಾನ್ ಈಗ ರಕ್ಷಿತ್ ಶೆಟ್ಟಿ ಟೀಂ ಸೇರಿದ್ದಾರೆ. ರಕ್ಷಿತ್ ಶೆಟ್ಟಿಯವರ ಪರಂವಾ ಸ್ಟುಡಿಯೋಸ್`ನ ಹೊಸ ಚಿತ್ರಕ್ಕೆ ವಿಹಾನ್ ಹೀರೋ. ಚಿತ್ರಕ್ಕಿನ್ನೂ ಟೈಟಲ್ ಆಯ್ಕೆಯಾಗಿಲ್ಲ. ವಿಹಾನ್ ಎದುರು ಅಂಕಿತಾ ಅಮರ್ ನಾಯಕಿ. ನಮ್ಮನೆ ಯುವರಾಣಿ ಮೂಲಕ ಗಮನ ಸೆಳೆದ ಪ್ರತಿಭೆ.  

ಚಿತ್ರಕ್ಕೆ ರಕ್ಷಿತ್ ಶೆಟ್ಟಿಯವರ ಸೆವೆನ್ ಆಡ್ಸ್ ಟೀಂನ ಚಂದ್ರಜಿತ್ ಬೆಳ್ಳಿಯಪ್ಪ ಡೈರೆಕ್ಟರ್.

ಬೆಳ್ಳಿಯಪ್ಪ ಈಗಾಗಲೇ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಕ್ಕೆ ಚಾಲನೆ ಕೊಟ್ಟಿದ್ದಾರೆ. ರಿಷಬ್ ಶೆಟ್ಟರ ವಿಭಿನ್ನ ಪ್ರಯೋಗ ಕಥಾಸಂಗಮದಲ್ಲಿ ರೈನ್ ಬೋ ಲ್ಯಾಂಡ್ ನಿರ್ದೇಶಿಸಿದ್ದ ಚಂದ್ರಜಿತ್ ಬೆಳ್ಳಿಯಪ್ಪ ಅವರಿಗೆ ಒಂದಿಡೀ ಸಿನಿಮಾ ಎಂಬ ಲೆಕ್ಕಕ್ಕೆ ಬಂದರೆ ಇದು ಮೊದಲ ಡೈರೆಕ್ಷನ್. ಕಥೆಗಾರರಾಗಿ ಈಗಾಗಲೇ ಅವನೇ ಶ್ರೀಮನ್ನಾರಾಯಣದಲ್ಲೂ ಕೆಲಸ ಮಾಡಿದ್ದವರು.

ಚಿತ್ರದಲ್ಲಿ ಹೀರೋಗೆ ಮೂರು ಶೇಡ್ ಇದೆ. ಕಾಲೇಜು ವಿದ್ಯಾರ್ಥಿ, ಕ್ರಿಕೆಟ್ ಆಟಗಾರ ಹಾಗೂ ಉದ್ಯಮಿ. ಈ ಮೂರೂ ಪಾತ್ರಗಳಲ್ಲಿ ವಿಹಾನ್ ನಟಿಸುತ್ತಿದ್ದಾರೆ. ಆ ಪಾತ್ರಕ್ಕೆ ಅವರೇ ಸೂಕ್ತ ಎನಿಸಿತು ಎಂದಿದ್ದಾರೆ ಬೆಳ್ಳಿಯಪ್ಪ. ಆಗಸ್ಟ್‍ನಲ್ಲಿ ಚಿತ್ರದ ಶೀರ್ಷಿಕೆ ಹೇಳ್ತಾರಂತೆ.