ಯುಐ. 7 ವರ್ಷಗಳ ನಂತರ ಉಪೇಂದ್ರ ಡೈರೆಕ್ಷನ್ ಮಾಡುತ್ತಿರೋ ಸಿನಿಮಾ. ಉಪ್ಪಿ ಕೇವಲ ನಟಿಸಿದ ಚಿತ್ರಗಳ ತೂಕ ಒಂದಾದರೆ.. ನಿರ್ದೇಶನ ಮಾಡುವ ಚಿತ್ರಗಳ ತೂಕವೇ ಬೇರೆ. ಹೀಗಾಗಿಯೇ ಈ ಚಿತ್ರಕ್ಕೆ ಯಾರು ಬರ್ತಾರೆ? ಕಲಾವಿದರು ಯಾರಿರ್ತಾರೆ ಅನ್ನೋ ಕುತೂಹಲ ಎಲ್ಲರಿಗೂ ಇರುತ್ತೆ. ಈಗ ಚಿತ್ರಕ್ಕೆ ಹಲವು ಕಲಾವಿದರ ಪ್ರವೇಶವಾಗಿದೆ.
ನಿಧಿ ಸುಬ್ಬಯ್ಯ ಆಯುಷ್ಮಾನ್ ಭವ ಚಿತ್ರದ ನಂತರ ನಟಿಸುತ್ತಿರೋ ಚಿತ್ರವಿದು. ಉಪ್ಪಿ ಕಾಲ್ ಮಾಡಿದಾಗ ಗೋವಾದಲ್ಲಿದ್ದರಂತೆ. ಪ್ರವಾಸವನ್ನು ಕಟ್ ಮಾಡಿ ಕಥೆ ಕೇಳೋಕೆ ಬಂದೆ. ಉಪ್ಪಿ ಸರ್ ಜೊತೆ ಈ ಹಿಂದೆ ಹಲವು ಪ್ರಾಜೆಕ್ಟ್ ಮಿಸ್ ಆಗಿದ್ದವು. ಈ ಬಾರಿ ಮಿಸ್ ಮಾಡಿಕೊಳ್ಳಲಿಲ್ಲ ಎಂದಿದ್ದಾರೆ ನಿಧಿ.
ಪತ್ರಕರ್ತರಾದ ಗೌರೀಶ್ ಅಕ್ಕಿ ಮತ್ತು ಇಂದ್ರಜಿತ್ ಲಂಕೇಶ್ ಪತ್ರಕರ್ತರ ಪಾತ್ರದಲ್ಲೇ ನಟಿಸುತ್ತಿದ್ದಾರೆ. ಇವರಿಬ್ಬರೂ ಪತ್ರಕರ್ತರಷ್ಟೇ ಅಲ್ಲ, ನಿರ್ದೇಶಕರೂ ಹೌದು.
ನಿರ್ದೇಶಕರಾಗಿರೋ ಓಂ ಪ್ರಕಾಶ್ ರಾವ್ ಕೂಡಾ ನಟಿಸುತ್ತಿದ್ದಾರೆ. ಮತ್ತೊಬ್ಬ ಡೈರೆಕ್ಟರ್ ಮಠ ಗುರು ಪ್ರಸಾದ್ ಕೂಡಾ ನಟಿಸಿದ್ದಾರೆ. ನಿರ್ಮಾಪಕರಾದ ಉಮೇಶ್ ಬಣಕಾರ್ ಕೂಡಾ ನಟಿಸಿದ್ದು, ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಕೂಡಾ ಯುಐ ಟೀಂ ಸೇರಿದ್ದಾರೆ. ಬಹುಭಾಷಾ ಕಲಾವಿದರ ಮುರಳಿಕೃಷ್ಣ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ.
ಚಿತ್ರ ಅದ್ಧೂರಿಯಾಗಿ ಸಿದ್ಧವಾಗುತ್ತಿದ್ದು ಸುಮಾರು ಒಂದು ಸಾವಿರ ಜನ ನಟಿಸುವ ದೊಡ್ಡ ಪ್ರಾಜೆಕ್ಟ್ ಇದಾಗಿದೆ. ಲಹರಿ ಮನೋಹರ್ ಮತ್ತು ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರ 2023ರಲ್ಲಿ ತೆರೆ ಕಾಣುವ ಸಾಧ್ಯತೆ ಇದೆ