ದಿನಕರ್ ತೂಗುದೀಪ್ ಸುದೀರ್ಘ ಗ್ಯಾಪ್ ನಂತರ ಡೈರೆಕ್ಷನ್ ಮಾಡ್ತಿರೋ ಚಿತ್ರ ಇತ್ತೀಚೆಗೆ ತಾನೇ ಮುಹೂರ್ತ ಆಚರಿಸಿಕೊಂಡಿತ್ತು. ಜಯಣ್ಣ ಭೋಗೇಂದ್ರ ನಿರ್ಮಾಣದಲ್ಲಿ ವಿರಾಟ್ ಹೀರೋ ಆಗಿರುವ ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಈಗ ಹೀರೋಯಿನ್ ಆಯ್ಕೆ ಆಗಿದೆ.
ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಸಂಜನಾ ಆನಂದ್ ಸಲಗ ಚಿತ್ರದಲ್ಲಿ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದ್ದರು. ವಿರಾಟ್ ಎದುರು ಸಂಜನಾ ಆನಂದ್ ನಟಿಸುತ್ತಿದ್ದಾರೆ. ಸದ್ಯಕ್ಕೆ ಸಂಜನಾ ಆನಂದ್ ತೆಲುಗು ಚಿತ್ರವೊಂದರಲ್ಲಿ ಬ್ಯುಸಿಯಾಗಿದ್ದಾರೆ. ಅದು ಮುಗಿದ ತಕ್ಷಣವೇ ಈ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಸಂಜನಾ ಆನಂದ್.
ಕಿಸ್ ನಂತರ ವಿರಾಟ್ ಎ.ಪಿ.ಅರ್ಜುನ್ ಅವರೊಂದಿಗೆ ಅದ್ಧೂರಿ ಲವರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಅವರಿಗೆ 3ನೇ ಸಿನಿಮಾ. ಲೈಫ್ ಜೊತೆ ಒಂದ್ ಸೆಲ್ಫಿ ನಂತರ ಸುದೀರ್ಘ ಗ್ಯಾಪ್ ನಂತರ ದಿನಕರ್ ನಿರ್ದೇಶಿಸುತ್ತಿರುವ ಚಿತ್ರವಿದು. ದಿನಕರ್ ಚಿತ್ರ ಎಂದ ಮೇಲೆ ನಿರೀಕ್ಷೆಯೂ ಹೆಚ್ಚಾಗಿಯೇ ಇರುತ್ತೆ.