` ಚೇಸ್ : ಪೊಲೀಸ್ ಪಾತ್ರದಲ್ಲಿ ರಾಧಿಕಾ ನಾರಾಯಣ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಚೇಸ್ : ಪೊಲೀಸ್ ಪಾತ್ರದಲ್ಲಿ ರಾಧಿಕಾ ನಾರಾಯಣ್
Radhika Narayan As police Officer In Chase

ರಂಗಿತರಂಗ ರಾಧಿಕಾ ವಿಭಿನ್ನ ಪಾತ್ರಗಳ ಮೂಲಕವೇ ಗಮನ ಸೆಳೆದ ನಾಯಕಿ. ರಾಧಿಕಾ ನಾರಾಯಣ್ ನಟಿಸಿದ್ದಾರೆ ಎಂದರೆ ಆ ಚಿತ್ರದಲ್ಲಿ ಒಂದೊಳ್ಳೆ ಕಥೆಯಿದೆ ಎಂದು ಭರವಸೆಯಿಂದ ಹೇಳಬಹುದು. ರಾಧಿಕಾ ಅವರ ಟ್ರ್ಯಾಕ್ ರೆಕಾರ್ಡ್ ಹಾಗಿದೆ. ಹೀಗಾಗಿಯೇ ಚೇಸ್ ಚಿತ್ರದ ಮೇಲೆ ಭರವಸೆಯೂ ಇದೆ.

ಚೇಸ್ ಚಿತ್ರದಲ್ಲಿ ನನ್ನದು ಪೊಲೀಸ್ ಪಾತ್ರ. ಹಾಗಂತ ಕಂಪ್ಲೀಟ್ ಕಾಪ್ ಅಲ್ಲ. ಟ್ರೈನಿಂಗ್‍ನಲ್ಲಿರೋ ಪೊಲೀಸ್ ನಾನು. ಆದರೆ ಕೆಲವು ಬೆಳವಣಿಗೆಗಳಿಂದಾಗಿ ಡ್ಯೂಟಿ ತಗೊಳ್ಳೋಕೆ ಆಗಲ್ಲ. ಒಂದು ವಿಚಿತ್ರ ಪರಿಸ್ಥಿತಿಯೊಳಗೆ ಸಿಕ್ಕಿಕೊಳ್ಳೋ ಪಾತ್ರ ನನ್ನದು ಎನ್ನುವ ರಾಧಿಕಾಗೆ ಚಿತ್ರದಲ್ಲಿ ಸ್ಟಂಟ್ ಸೀನ್‍ಗಳೂ ಇವೆಯಂತೆ. ನಾಯಿಯ ಜೊತೆಯೂ ನಟಿಸಿದ್ದಾರಂತೆ.

ರಾಧಿಕಾ ಅವರ ಜೊತೆ ಅವಿನಾಶ್ ನರಸಿಂಹ ರಾಜು, ಅರ್ಜುನ್ ಯೋಗಿ, ಶೀತಲ್ ಶೆಟ್ಟಿ, ಸುಶಾಂತ್ ಪೂಜಾರಿ ಸೇರಿದಂತೆ ಕಲಾವಿದರ ಸೈನ್ಯವೇ ಇದೆ. ವಿಲೋಕ್ ಶೆಟ್ಟಿ ನಿರ್ದೇಶನದ ಟ್ರೇಲರ್ ಕುತೂಹಲ ಹುಟ್ಟಿಸಿದೆ.