` ಹಿರೋಷಿಮಾ.. ನಾಗಸಾಕಿ.. : ಜಮಾಲಿಗುಡ್ಡದಲ್ಲಿ 2ನೇ ವಿಶ್ವಯುದ್ಧದ ದುರಂತ ನಗರ ನೆನಪಾಗಿದ್ಯಾಕೆ? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಹಿರೋಷಿಮಾ.. ನಾಗಸಾಕಿ.. : ಜಮಾಲಿಗುಡ್ಡದಲ್ಲಿ 2ನೇ ವಿಶ್ವಯುದ್ಧದ ದುರಂತ ನಗರ ನೆನಪಾಗಿದ್ಯಾಕೆ?
Once Upon A Time In Jamaligudda Movie Image

ಹಿರೋಷಿಮಾ ಮತ್ತು ನಾಗಸಾಕಿ. ಈ ಎರಡೂ ಹೆಸರನ್ನು ಜಗತ್ತು ಮರೆಯುವಂತೆಯೇ ಇಲ್ಲ. ಅಮೆರಿಕ ಸೃಷ್ಟಿಸಿದ್ದ ವಿಧ್ವಂಸಕ ಪರಮಾಣು ಬಾಂಬ್ ಪ್ರಯೋಗಕ್ಕೆ ಬಲಿಯಾದ ಜಪಾನ್‍ನ ನಗರಗಳಿವು. ಆ ದುರಂತದ ತೀವ್ರತೆ.. ಭಯಾನಕತೆ.. ಈಗ ನೋಡಿದರೂ ಎದೆ ನಡುಗುತ್ತದೆ. ಆದರೆ.. ಜಮಾಲಿಗುಡ್ಡದಲ್ಲಿ ಹಾಗಾಗಿಲ್ಲ. ಅವು ಪಾತ್ರಗಳಾಗಿ ಬಂದಿವೆ.

ಹೀರೋ ಡಾಲಿ ಧನಂಜಯ್ ಹಿರೋಷಿಮಾ ಅಂತೆ. ವಿಲನ್ ಯಶ್ ಶೆಟ್ಟಿ ನಾಗಸಾಕಿಯಂತೆ. ಅವರಿಬ್ಬರೂ ಖೈದಿಗಳೇ ಇರಬೇಕು ಅನ್ನೋ ಅರ್ಥ ಡಾಲಿಯ ಸ್ಟೇಟ್`ಮೆಂಟ್`ನಲ್ಲಿದೆ. ಅವಳಿ ಖೈದಿಗಳು ಅವಳಿ ನಗರಗಳ ಹೆಸರಲ್ಲಿ ಅಂದಿದ್ದಾರೆ ಡಾಲಿ.

ಡಾಲಿ ಜಮಾಲಿಗುಡ್ಡ ಒನ್ಸ್ ಅಪಾನ್ ಎ ಟೈಂ ಚಿತ್ರದಲ್ಲಿ ಬಾರ್ ಸಪ್ಲೈಯರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದಿತಿ ಪ್ರಭುದೇವ ಹೀರೋಯಿನ್. ಕುಶಾಲ್ ಗೌಡ ನಿರ್ದೇಶನದ ಚಿತ್ರಕ್ಕೆ ಶ್ರೀಹರಿ ನಿರ್ಮಾಪಕರು.