ರಮ್ಯಾ ಮತ್ತೆ ಚಿತ್ರರಂಗಕ್ಕೆ ಬರೋದು ಹೆಚ್ಚೂ ಕಡಿಮೆ ಕನ್‍ಫರ್ಮ್ ಆಗಿದೆ. ವಾಪಸ್ ಬರುವುದಾದರೆ ಪುನೀತ್ ಚಿತ್ರದಲ್ಲೇ ಬರುತ್ತೇನೆ ಎಂದು ಓಪನ್ ಆಗಿ ಹೇಳಿದ್ದರು ರಮ್ಯಾ. ಮೂಲಗಳ ಪ್ರಕಾರ ದ್ವಿತ್ವ ಚಿತ್ರಕ್ಕೆ ರಮ್ಯಾ ಓಕೆ ಎಂದೂ ಆಗಿತ್ತು. ಆದರೆ ವಿಧಿಯಾಟ ಬೇರೆಯೇ ಇತ್ತು. ಈಗ ಮತ್ತೊಮ್ಮೆ ರಮ್ಯಾ ಚಿತ್ರರಂಗಕ್ಕೆ ಬರಲಿದ್ದಾರೆ ಅನ್ನೋ ಸುದ್ದಿ ಸದ್ದು ಮಾಡ್ತಿದೆ.
ಇತ್ತೀಚೆಗೆ ರಮ್ಯಾ ಕನ್ನಡ ಚಿತ್ರಗಳ ಬಗ್ಗೆ ವಿಶೇಷ ಪ್ರೀತಿ ತೋರಿಸುತ್ತಿದ್ದಾರೆ. ಬಹುಶಃ ರಾಜಕೀಯದ ಜಂಜಾಟಗಳಿಂದ ಮುಕ್ತರಾದ ಬಳಿಕ ಮತ್ತೆ ಬಣ್ಣದ ಲೋಕದತ್ತ ಮುಖ ಮಾಡಿದ್ದಾರೆ. ರಮ್ಯಾ 777 ಚಾರ್ಲಿ ಚಿತ್ರದ ಬಗ್ಗೆ ಸುದೀರ್ಘ ರಿವ್ಯೂ ಕೊಟ್ಟಿದ್ದರು. ಕೆಲವು ಚಿತ್ರಗಳನ್ನು ಪ್ರಮೋಟ್ ಮಾಡಿದ್ದರು. ಡಾಲಿ ಧನಂಜಯ್ ಅವರ ಆರ್ಕೆಸ್ಟ್ರಾ ಮೈಸೂರು ಚಿತ್ರದ ಟೀಸರ್ ರಿಲೀಸ್ ಮಾಡಿ, ಅದನ್ನು ನೇರವಾಗಿ ನರೇಂದ್ರ ಮೋದಿಯವರಿಗೇ ಟ್ಯಾಗ್ ಮಾಡಿ ಹುಬ್ಬೇರುವಂತೆ ಮಾಡಿದ್ದರು. ಈಗ ಇದ್ದಕ್ಕಿದ್ದಂತೆ ಹೊಯ್ಸಳ ಸೆಟ್`ನಲ್ಲಿ ಪ್ರತ್ಯಕ್ಷರಾಗಿದ್ದಾರೆ.
ಅಂದಹಾಗೆ ಹೊಯ್ಸಳ, ಕೆಆರ್`ಜಿ ಸ್ಟುಡಿಯೋಸ್ ಸಿನಿಮಾ. ಕಾರ್ತಿಕ್ ಗೌಡ ಬ್ಯಾನರ್ ಚಿತ್ರವಿದು. ಡಾಲಿ ಧನಂಜಯ್ ಮತ್ತು ಅಮೃತಾ ಅಯ್ಯಂಗಾರ್ ಒಟ್ಟಿಗೇ ನಟಿಸುತ್ತಿರೋ ಸಿನಿಮಾ. ಈಗ ಕಾರ್ತಿಕ್ ಗೌಡ ಅವರ ಚಿತ್ರದ ಸೆಟ್ಟಿಗೆ ಭೇಟಿ ಕೊಟ್ಟಿರೋ ರಮ್ಯಾ ಒಂದು ಕುತೂಹಲವನ್ನಂತೂ ಹುಟ್ಟುಹಾಕಿದ್ದಾರೆ.
ಮೂಲಗಳ ಪ್ರಕಾರ ರಮ್ಯಾ ಕೆಆರ್`ಜಿ ಸ್ಟುಡಿಯೋಸ್ ಅವರ ಜೊತೆ ಕಥೆಯೊಂದರ ಡಿಸ್ಕಷನ್`ನಲ್ಲಿದ್ದಾರೆ. ಆದರೆ ಇಲ್ಲಿ ಇನ್ನೂ ಒಂದು ಕನ್‍ಫ್ಯೂಷನ್ ಇದೆ. ಕಾರ್ತಿಕ್ ಗೌಡ ಹೊಂಬಾಳೆಯ ಬೇರುಗಳಲ್ಲಿ ಒಬ್ಬರು. ಕಾರ್ತಿಕ್ ಗೌಡ ಅವರ ಟೀಮಿನ ಜೊತೆ ಇರೋ ರಮ್ಯಾ, ಕೆಆರ್`ಜಿ ಸ್ಟುಡಿಯೋ ಸಿನಿಮಾ ಮಾಡ್ತಾರಾ? ಅಥವಾ ಹೊಂಬಾಳೆ ಜೊತೆ ಸಿನಿಮಾ ಮಾಡ್ತಾರಾ? ನಿರೀಕ್ಷೆಗಳು ಚಾಲ್ತಿಯಲ್ಲಿವೆ.