` ರಾಜಕುಮಾರಿಯ ನಿತ್ಯಾನಂದ ಪ್ರೀತಿ.. ಹ್ಹಹ್ಹಹ್ಹಹ್ಹಹ್ಹಾ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ರಾಜಕುಮಾರಿಯ ನಿತ್ಯಾನಂದ ಪ್ರೀತಿ.. ಹ್ಹಹ್ಹಹ್ಹಹ್ಹಹ್ಹಾ..
Priya Anand Image

ಒಂದು ವಿಡಿಯೋ ಏನೇನೆಲ್ಲ ಮಾಡಬಹುದು ಅನ್ನೋದಕ್ಕೆ ಪ್ರಿಯಾ ಆನಂದ್ ಅವರ ಈ ವಿಡಿಯೋಗಿಂತ ದೊಡ್ಡ ಉದಾಹರಣೆ ಬೇಕಿಲ್ಲ. ಪ್ರಿಯಾ ಆನಂದ್ ಎಂದರೆ ಕನ್ನಡಿಗರು ರಾಜಕುಮಾರಿ ಅಂತಾರೆ. ಕಾರಣ, ರಾಜಕುಮಾರ ಚಿತ್ರದ ಹೀರೋಯಿನ್ ಆಗಿದ್ದವರು. ರಾಜಕುಮಾರ, ಆರೆಂಜ್, ಜೇಮ್ಸ್ ಚಿತ್ರಗಳಲ್ಲಿ ನಟಿಸಿದ್ದ ಪ್ರಿಯಾ ಆನಂದ್ ಈಗ.. ಇದೇ ಮೊದಲ ಬಾರಿಗೆ ಟ್ರೋಲ್ ಆಗಿದ್ದಾರೆ. ಅದೂ ನಿತ್ಯಾನಂದನಿಗಾಗಿ.

ನಿತ್ಯಾನಂದ ಅದೆಷ್ಟು ಕಾಂಟ್ರವರ್ಸಿ ಸ್ವಾಮಿ ಅನ್ನೋದು ಇಡೀ ಜಗತ್ತಿಗೇ ಗೊತ್ತು. ಸೂರ್ಯನನ್ನೇ ಲೇಟ್ ಆಗಿ ಬರುವಂತೆ ಮಾಡುವ ಪವಾಡ ಪುರುಷನಿಗೂ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರಿದ್ದಾರೆ. ಇದರ ಬಗ್ಗೆ ಮಾತನಾಡುತ್ತಾ ಪ್ರಿಯಾ ಆನಂದ್ ಮಾಡಿರೋ ಜೋಕು.. ಈಗ ಟ್ರೋಲ್ ಆಗುತ್ತಿದೆ.

ನಿತ್ಯಾನಂದ ಅವರ ಪೇಜ್`ನ್ನ ನಾನು ಫಾಲೋ ಮಾಡ್ತೀನಿ. ಲೈಕ್ಸ್ ಕೊಡ್ತೀನಿ. ಅವರ ಬಗ್ಗೆ ಏನಾದರೂ ವಿವಾದ ಇರಬಹುದು. ಆದರೆ, ಅವರಿಗೂ ಲಕ್ಷಾಂತರ ಭಕ್ತರಿದ್ದಾರೆ. ಏನೋ ವಿಶೇಷ ಇರಲೇಬೇಕು. ಬೇಕಾದರೆ ಅವರನ್ನು ಮದುವೆ ಆಗೋಕೂ ಸಿದ್ಧ. ಯಾಕಂದ್ರೆ ಆಗ ನಾನು ನನ್ನ ಹೆಸರು ಬದಲಿಸಿಕೊಳ್ಳೋ ಪ್ರಮೇಯವೇ ಬರಲ್ಲ ಎಂದು ಜೋಕ್ ಮಾಡಿದ್ದಾರೆ.

ಕಾಮಿಡಿ ಈಗ ಟ್ರೋಲ್ ಆಗಿದೆ.