ವಿಕ್ರಾಂತ್ ರೋಣ ಚಿತ್ರ ಮೊದಲು ಅನೂಪ್ ಭಂಡಾರಿ-ಸುದೀಪ್ ಅವರ ಲಿಸ್ಟ್‍ನಲ್ಲಿ ಇಲ್ಲ. ಮೊದಲಿಗೆ ಶುರುವಾಗಿದ್ದು ಬಿಲ್ಲರಂಗಭಾಷಾ. ಆದರೆ ಸುದೀಪ್ ಹೇಳುವಂತೆ.. ಅದೇಕೋ ಒಂದು ಹಂತದಲ್ಲಿ ಆ ಸ್ಕ್ರಿಪ್ಟ್ ಹೋಲ್ಡ್ ಆಗುತ್ತಿತ್ತು. ಮುಂದೆ ಹೋಗ್ತಾನೇ ಇರಲಿಲ್ಲ. ಆ ಟೈಂನಲ್ಲಿ ಅನೂಪ್ ಹೇಳಿದ ಎಳೆಯೇ ಇದು. ವಿಕ್ರಾಂತ್ ರೋಣ ಸ್ಟೋರಿ. ನನಗೆ ಹಾಲಿವುಡ್`ನ ಇಂಡಿಯಾನಾ ಜೋನ್ಸ್, ಜುಮಾಂಜಿಯಂತಾ ಚಿತ್ರಗಳು ಇಷ್ಟ. ಅಂತಾ ಸಿನಿಮಾ ಮಾಡೋ ಪ್ಲಾನ್ ಮಾಡಿದೆ. ಮೊದಲು ಈ ಸಿನಿಮಾನಾ 9 ಕೋಟಿಯಲ್ಲಿ ಮಾಡೋಕೆ ನಾನೇ ನಿರ್ಧರಿಸಿದ್ದೆ. ಆದರೆ ಕಥೆ ಬೆಳೆಯುತ್ತಾ ಹೋದಂತೆ ಬಜೆಟ್ ಕೂಡಾ ಬೆಳೀತು. ನನ್ನ ವೃತ್ತಿ ಬದುಕಿನ ದೊಡ್ಡ ಸಿನಿಮಾ ಆಯಿತು ಎನ್ನುತ್ತಾರೆ ಸುದೀಪ್.
ಅನೂಪ್ ಅವರಿಗೆ ದೊಡ್ಡ ಬಜೆಟ್ ಸಿನಿಮಾ ಮಾಡಿ ಅನುಭವ ಇರಲಿಲ್ಲ. ಆದರೆ, ಅವರು ಹಾಕಿದ ಹಣವನ್ನು ಒಂದಿಷ್ಟೂ ವೇಸ್ಟ್ ಮಾಡಲಿಲ್ಲ. ದುಡ್ಡಿದೆ ಎಂದು ಬೇಕಾಬಿಟ್ಟಿ ಖರ್ಚು ಮಾಡಲಿಲ್ಲ. ಒಂದೊಳ್ಳೆ ಟೀಂ ಕಟ್ಟಿ ಒಳ್ಳೆ ಸಿನಿಮಾ ಮಾಡಿದ್ದಾರೆ. ಅವರ ಜೊತೆ ಜಾಕ್ ಮಂಜು ಇದ್ದರು ಎನ್ನುವ ಮೂಲಕ ಸಿನಿಮಾ ಹುಟ್ಟಿದ್ದು ಹೇಗೆ ಅನ್ನೋದನ್ನ ಬಿಚ್ಚಿಟ್ಟಿದ್ದಾರೆ ಕಿಚ್ಚ.
ದುಡ್ಡಿದೆ ಎಂದು ಖರ್ಚು ಮಾಡಿ ಬಜೆಟ್ ಏರಿಸಿದ ಸಿನಿಮಾ ಇದಲ್ಲ. ಅನೂಪ್ ಪೈಸೆ ಪೈಸೆಯನ್ನೂ ಅಳೆದೂ ತೂಗಿ ಖರ್ಚು ಮಾಡಿದ್ದಾರೆ. ಐಡಿಯಾಗಾಗಿ ಖರ್ಚು ಮಾಡಿದ್ದಾರೆ. ಖರ್ಚು ಮಾಡಿದ ಪ್ರತಿ ಹಣಕ್ಕೂ ತೆರೆಯ ಮೇಲೆ ಲೆಕ್ಕ ಇದೆ. ಹೀಗಾಗಿ ಚಿತ್ರದ ಬಜೆಟ್ 100 ಕೋಟಿ ದಾಟಿತು ಎಂದಿದ್ದಾರೆ ಸುದೀಪ್.