ಪೊನ್ನಿಯಿನ್ ಸೆಲ್ವನ್. ಚೋಳರ ಕಾಲದ ಕಥೆ. ಚೋಳರು ಮತ್ತು ಪಾಂಡ್ಯರ ನಡುವೆ ನಡೆದ ಯುದ್ಧ ಮತ್ತು ಮರಾಮೋಸದ ಯುದ್ಧಗಳ ಕಥೆ. ರಾಣಿ ನಂದಿನಿಯ ಸೌಂದರ್ಯ, ಯುದ್ಧ, ಸೇಡುಗಳ ಕಥೆ. ಇದು ಐಶ್ವರ್ಯಾ ರೈ ಮತ್ತು ಮಣಿರತ್ನಂ ಕಾಂಬಿನೇಷನ್ ಸಿನಿಮಾ. ಮಣಿರತ್ನಂ ನಿರ್ದೇಶನದ ಈ ಚಿತ್ರದಲ್ಲಿ ಐಶ್ವರ್ಯಾ ರೈ, ತ್ರಿಷಾ, ವಿಕ್ರಂ, ಕಾರ್ತಿ, ಜಯಂ ರವಿ, ಪ್ರಕಾಶ್ ರೈ.. ಹೀಗೆ ದೊಡ್ಡ ಕಲಾವಿದರ ದಂಡೇ ಇದೆ.
ಚಿತ್ರ ಕನ್ನಡದಲ್ಲೂ ಬರುತ್ತಿದ್ದು, ಕನ್ನಡದ ಟೀಸರ್‍ನ್ನು ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಿದ್ದಾರೆ. ಕಲ್ಕಿ ಕೃಷ್ಣಮೂರ್ತಿ ಎಂಬುವವರು 1955ರಲ್ಲಿ ಬರೆದಿದ್ದ ಬೃಹತ್ ಕಾದಂಬರಿಗಳನ್ನು ಆಧರಿಸಿ ಮಾಡಿರುವ ಸಿನಿಮಾ ಇದು. ಚಿತ್ರ ಎರಡು ಭಾಗಗಳಲ್ಲಿ ಬರುತ್ತಿದ್ದು, ಈಗ ಮೊದಲ ಭಾಗ ಸಿದ್ಧವಾಗಿದೆ. ಬಾಹುಬಲಿ, ಪುಷ್ಪ, ಆರ್.ಆರ್.ಆರ್. ಕೆಜಿಎಫ್, ವಿಕ್ರಂ ನಂತರ ಇದು ದಕ್ಷಿಣದಿಂದ ಬರಲಿರುವ ಮತ್ತೊಂದು ಬ್ಲಾಕ್ ಬಸ್ಟರ್ ಎನ್ನುತ್ತಿದೆ ಬಾಲಿವುಡ್.