ಕೆಂಡಸಂಪಿಗೆ ಮೂಲಕ ಬೆಳ್ಳಿತೆರೆಗೆ ಬಂದ ಮಾನ್ವಿತಾ ಕಾಮತ್ ಜರ್ನಲಿಸಂ ಪದವೀಧರೆ. ರೇಡಿಯೋ ಸೇರಿದಂತೆ ಕೆಲವೆಡೆ ಕೆಲಸ ಮಾಡಿಯೂ ಅನುಭವ ಇದ್ದ ಮಾನ್ವಿತಾ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದವರು. ಆದರೆ.. ಕೆಂಡಸಂಪಿಗೆ.. ನಂತರ ಟಗರು ಹಿಟ್ ಆದ ನಂತರ ಸಂಪೂರ್ಣ ಚಿತ್ರರಂಗದಲ್ಲೇ ಮುಳುಗಿದ್ದರು. ಇದರ ನಡುವೆ ಒಂದು ಆಸೆ ಹಾಗೆಯೇ ಉಳಿದುಕೊಂಡಿತ್ತು. ಅದು, ಮಾಸ್ಟರ್ ಡಿಗ್ರಿ ಕಂಪ್ಲೀಟ್ ಮಾಡುವ ಆಸೆ. ಆ ಆಸೆಯನ್ನೀಗ ಈಡೇರಿಸಿಕೊಂಡಿದ್ದಾರೆ ಮಾನ್ವಿತಾ.
ಸಿನಿಮಾಗಳಿಂದ ಬ್ರೇಕ್ ತೆಗೆದುಕೊಳ್ಳೋದು.. ಮತ್ತು ನನ್ನ ಸೇವಿಂಗ್ಸ್ ಹಣದಲ್ಲೇ ಜೀವನ ಸಾಗಿಸೋದು.. ಜೊತೆಗೆ ಓದು. ಇವಿಷ್ಟೂ ಅಂದುಕೊಂಡಷ್ಟು ಸುಲಭ ಅಲ್ಲ. ಆದರೆ, ನಾನೀಗ ಸಾಧಿಸಿದ್ದೇನೆ. ಮಾಸ್ಟರ್ ಡಿಗ್ರಿ ಡಿಸ್ಟಿಂಕ್ಷನ್‍ನಲ್ಲಿ ಆಗಿದೆ. ಅಮ್ಮನಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ. ಇನ್ನು ಮುಂದೆ ಮತ್ತೆ ಸಿನಿಮಾ.. ಸಿನಿಮಾ.. ಸಿನಿಮಾ.. ಎಂದು ಬರೆದುಕೊಂಡಿದ್ದಾರೆ ಮಾನ್ವಿತಾ ಕಾಮತ್.
ಸದ್ಯಕ್ಕೆ ಮಾನ್ವಿತಾ ಕಾಮತ್ ಅವರ ಶಿವ 143, ರಾಜಸ್ತಾನ್ ಡೈರೀಸ್ ಮತ್ತು ಹ್ಯಾಪಿ ಮ್ಯಾರೀಡ್ ಚಿತ್ರಗಳು ಸಿದ್ಧವಾಗಿವೆ. ಶಿವ 143 ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ಮಾನ್ವಿತಾ. ಬಹುಶಃ ಶಿವ 143 ಮೊದಲ ರಿಲೀಸ್ ಆಗಬಹುದು.