ಕಿಚ್ಚ ಸುದೀಪ್ ತಮ್ಮ ವೃತ್ತಿ ಜೀವನದ ಎರಡು ಸಿನಿಮಾಗಳನ್ನು ನೆನಪಿಸಿಕೊಂಡಿದ್ದಾರೆ. ಎರಡೂ ಚಿತ್ರಗಳು ಜುಲೈ 6ರಂದೇ ರಿಲೀಸ್ ಆಗಿರುವುದು ವಿಶೇಷ. ಒಂದು ಸಿನಿಮಾ ಸುದೀಪ್ ಎಂಬ ನಟನಿಗೆ ಕಿಚ್ಚ ಎಂದು ಬಿರುದು ನೀಡಿದ ಸಿನಿಮಾ.
ತಮ್ಮ ಚಿತ್ರದ ಒಂದು ಪಾತ್ರದ ಹೆಸರನ್ನೇ ತಮ್ಮ ಬಿರುದನ್ನಾಗಿ ಪಡೆದುಕೊಂಡಿರೋ ನಟ ಸುದೀಪ್. ಹುಚ್ಚ ಚಿತ್ರಕ್ಕೆ ಮುನ್ನ ತಾಯವ್ವ, ಪ್ರತ್ಯರ್ಥ, ಸ್ಪರ್ಶ ಚಿತ್ರಗಳಲ್ಲಿ ನಟಿಸಿದ್ದರೂ, ಅದ್ಭುತ ಯಶಸ್ಸು ಕೊಟ್ಟಿದ್ದು ಹುಚ್ಚ. ಓಂಪ್ರಕಾಶ್ ರಾವ್ ನಿರ್ದೇಶನದ ಹುಚ್ಚ 25 ವಾರ ಯಶಸ್ವೀ ಪ್ರದರ್ಶನ ಕಂಡಿತ್ತು.
ಈಗ ಸಿನಿಮಾ ಕೂಡಾ ರಿಲೀಸ್ ಆಗಿದ್ದು ಜುಲೈ 6ರಂದೇ ಎನ್ನುವುದು ವಿಶೇಷ. ಸುದೀಪ್ ಎಂಬ ನಟನ ಅದ್ಭುತ ಪ್ರತಿಭೆಯನ್ನು ಇಡೀ ಭಾರತೀಯ ಚಿತ್ರರಂಗ ಮತ್ತು ಪ್ರೇಕ್ಷಕರು ಬೆರಗಾಗಿ ನೋಡಿದ ಸಿನಿಮಾ ಈಗ. ರೆಗ್ಯುಲರ್ ಕಮರ್ಷಿಯಲ್ ಸಿನಿಮಾಗಳಿಂದ ರಾಜಮೌಳಿ ಹೊಸ ಸಾಹಸ ಪ್ರಯೋಗಗಳಿಗೆ ಓಪನ್ ಆದ ಸಿನಿಮಾ ಕೂಡಾ ಈಗ. ನಂತರದ ರಾಜಮೌಳಿಯ ಸಾಧನೆಗೆ ಒಂದು ರೀತಿಯಲ್ಲಿ ಮುನ್ನುಡಿ ಬರೆದ ಚಿತ್ರ ಈಗ. ಎರಡೂ ಚಿತ್ರಗಳ ಸಂಭ್ರಮ ನೆನಪಿಸಿಕೊಂಡಿದ್ದಾರೆ ಕಿಚ್ಚ.