ಈ ಬಾರಿ ರಾಜ್ಯಸಭೆ ನಾಮನಿರ್ದೇಶನದಲ್ಲಿ ದಕ್ಷಿಣ ಭಾರತವೇ ಸಂಪೂರ್ಣ ಆವರಿಸಿಕೊಂಡಿದೆ. ಸಿನಿಮಾ ಕ್ಷೇತ್ರದಿಂದ ಇಬ್ಬರು, ಧಾರ್ಮಿಕ ಸೇವಾ ಕ್ಷೇತ್ರದಿಂದ ಒಬ್ಬರು ಹಾಗೂ ಕ್ರೀಡಾ ಕ್ಷೇತ್ರದಿಂದ ಒಬ್ಬರು ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡಿಗೆ ತಲಾ ಒಂದೊಂದು ರಾಜ್ಯಸಭಾ ಸ್ಥಾನ ಲಭಿಸಿದೆ. ಇದು ಚುನಾವಣೆ ಆಯ್ಕೆಯಲ್ಲ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸಂಸತ್ ನೀಡುವ ಗೌರವ. ನಾಮನಿರ್ದೇಶನದ ಸ್ಥಾನ.
ವೀರೇಂದ್ರ ಹೆಗ್ಗಡೆ ಧರ್ಮಸ್ಥಳದ ಧರ್ಮಾಧಿಕಾರಿ. ಮಂಜುನಾಥನ ಸನ್ನಿಧಿಯ ಪೂಜೆ ಪುನಸ್ಕಾರಗಳಷ್ಟೇ ಅಲ್ಲ, ಸಾಮಾಜಿಕ ಸೇವೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡಿರುವ ಪೂಜನೀಯ ವ್ಯಕ್ತಿ ಹೆಗ್ಗಡೇರು.
ಇಳಯರಾಜ. ಸಂಗೀತ ಲೋಕದ ಮಾಂತ್ರಿಕ. ತಮಿಳು, ಕನ್ನಡ, ತೆಲುಗು, ಮಲಯಾಳಂ, ಹಿಂದಿ.. ಹೀಗೆ ಹಲವು ಭಾಷೆಗಳ ಚಿತ್ರರಂಗದಲ್ಲಿ ಸಂಗೀತದ ಅಲೆ ಎಬ್ಬಿಸಿದ ಸಂಗೀತಗಾರ.
ವಿ. ವಿಜಯ್ ಪ್ರಸಾದ್ ಬಾಹುಬಲಿ, ಆರ್ಆರ್ಆರ್, ಭಜರಂಗಿ ಭಾಯಿಜಾನ್ ಸೇರಿದಂತೆ ಹಲವು ಚಿತ್ರಗಳ ಕಥೆಗಾರ.
ಇನ್ನು ಪಿ.ಟಿ.ಉಷಾ.. ಇಂದಿಗೂ ಭಾರತೀಯ ಅಥ್ಲೆಟಿಕ್ಸ್ ಸಾಧಕರಿಗೆ ಸ್ಫೂರ್ತಿಯಾಗಿರುವ ಓಟಗಾರ್ತಿ. ರನ್ನಿಂಗ್ ರೇಸ್ನಲ್ಲಿ ಇಂದಿಗೂ ಪಿಟಿ ಉಷಾ ಸಾಧನೆ ಭಾರತೀಯ ದಾಖಲೆಗಳ ಮಟ್ಟಿಗೆ ಅಜರಾಮರವಾಗಿಯೇ ಇದೆ.