ಇತ್ತೀಚೆಗೆ ಕನ್ನಡ ಸಿನಿಮಾ ಮತ್ತು ಪೋಸ್ಟರ್`ಗಳಲ್ಲಿ ರವಿಚಂದ್ರನ್ ಹೆಸರು ಬದಲಾಗಿರೋದನ್ನು ಗಮನಿಸಿಯೇ ಇರುತ್ತೀರಿ. ಮೊದಲೆಲ್ಲ ವಿ.ರವಿಚಂದ್ರನ್ ಎಂದಿರುತ್ತಿದ್ದ ಹೆಸರು ಈಗ ರವಿಚಂದ್ರ ವಿ ಎಂದು ಬದಲಾಗಿದೆ. ಸಂಖ್ಯಾಶಾಸ್ತ್ರಜ್ಞರೊಬ್ಬರ ಸಲಹೆ ಮೇರೆಗೆ ಬದಲಿಸಿದ್ದೇನೆ ಎಂದಿದ್ದರು ರವಿಚಂದ್ರನ್. ನಂಬಿಕೆ ಎನ್ನುವುದಕ್ಕಿಂತ ಹೆಚ್ಚಾಗಿ ಹಾಗೆ ಸಲಹೆ ನೀಡಿದ್ದ ವ್ಯಕ್ತಿ ಅಭಿಮಾನಿಯಾಗಿದ್ದರು ಹಾಗೂ ಪ್ರೀತಿಯ ಒತ್ತಾಯ ಮಾಡಿದ್ದರು. ಅದನ್ನು ರವಿಚಂದ್ರನ್ ಬಹಿರಂಗವಾಗಿ ಹೇಳಿಕೊಂಡಿದ್ದರು.
ನಾನು ಹೆಸರು ಬದಲಿಸಿದರೂ ಜನರಂತೂ ಬದಲಾಗಲ್ಲ. ಅವರು ವಿ.ರವಿಚಂದ್ರನ್ ಎಂದೇ ಗುರುತಿಸ್ತಾರೆ ಎಂದೂ ಹೇಳಿದ್ದರು. ಈಗ ಅದೇ ಹಾದಿಯಲ್ಲಿದ್ದಾರೆ ತೆಲುಗು ಮೆಗಾಸ್ಟಾರ್ ಚಿರಂಜೀವಿ.
ಇತ್ತೀಚೆಗೆ ಚಿರಂಜೀವಿಯವರ ಹೊಸ ಸಿನಿಮಾ ಗಾಡ್ಫಾದರ್ ಪೋಸ್ಟರ್ ಬಿಡುಗಡೆಯಾಗಿದೆ. ಆ ಪೋಸ್ಟರ್ನಲ್ಲಿ ಚಿರಂಜೀವಿ ಹೆಸರಲ್ಲಿ ಇಂಗ್ಲಿಷಿನಲ್ಲಿ ಇನ್ನೊಂದು ಇ ಸೇರಿಕೊಂಡಿದೆ. ಇದು ಸಂಖ್ಯಾಶಾಸ್ತ್ರಜ್ಞರ ಸಲಹೆ ಎನ್ನುತ್ತಿದೆ ಟಾಲಿವುಡ್. ಇತ್ತೀಚೆಗೆ ಚಿರಂಜೀವಿಯವರ ಆಚಾರ್ಯ ಚಿತ್ರದ ದಯನೀಯ ಸೋಲು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಅಂದಹಾಗೆ ಗಾಡ್ಫಾದರ್ ಮಲಯಾಳಂನ ಲೂಸಿಫರ್ ಚಿತ್ರದ ರೀಮೇಕ್.