` ಲಾಯರ್ ಕೃಷ್ಣಮೂರ್ತಿ..ಅಗರಬತ್ತಿ ಮಾದಪ್ಪ..ಬ್ಯೂಟಿಷಿಯನ್ ಕವಿತಾ ಪೆಟ್ರೋಮ್ಯಾಕ್ಸ್ ಜೊತೆ ಜೊತೆಯಲಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಲಾಯರ್ ಕೃಷ್ಣಮೂರ್ತಿ..ಅಗರಬತ್ತಿ ಮಾದಪ್ಪ..ಬ್ಯೂಟಿಷಿಯನ್ ಕವಿತಾ ಪೆಟ್ರೋಮ್ಯಾಕ್ಸ್ ಜೊತೆ ಜೊತೆಯಲಿ
Petromax Movie Image

ಪೋಲಿ ತುಂಟರ ಗುರು ವಿಜಯ್ ಪ್ರಸಾದ್ ನಿರ್ದೇಶನದ ಪೆಟ್ರೋಮ್ಯಾಕ್ಸ್ ರಿಲೀಸ್ ಆಗುವುದಕ್ಕೆ ತಯಾರಾಗಿರುವಾಗಲೇ ಚಿತ್ರದ ಒಂದೊಂದೇ ಪಾತ್ರಗಳನ್ನು ಪರಿಚಯಿಸಲು ಶುರು ಮಾಡಿದ್ದಾರೆ ಡೈರೆಕ್ಟರ್. ನೀನಾಸಂ ಸತೀಶ್ ಹೀರೋ ಆಗಿರುವ ಚಿತ್ರದಲ್ಲಿ ನಾಗಭೂಷಣ್, ಅರುಣ್ ಮತ್ತು ಕಾರುಣ್ಯರಾಮ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಎಲ್ಲರೂ ಅನಾಥರೇ. ಅವರೆಲ್ಲರ ಪಾತ್ರಗಳ ಪುಟ್ಟ ಪುಟ್ಟ ಕಥೆ ಹೇಳಿದ್ದಾರೆ ವಿಜಯ್ ಪ್ರಸಾದ್.

ಲಾಯರ್ ಕೃಷ್ಣಮೂರ್ತಿ ಪಾತ್ರದಲ್ಲಿರೋದು ನಾಗಭೂಷಣ್.  ಲಾಯರ್ ಆಗಬೇಕೆಂದು ಪ್ರಾಕ್ಟೀಸ್ ಮಾಡುವ ಹುಡುಗ. ಇಡೀ ಚಿತ್ರದಲ್ಲಿ ಪಾಯಿಂಟ್ ಮೇಲೆ ಪಾಯಿಂಟ್ ಹಾಕ್ತಾನೇ ಇರ್ತಾರಂತೆ.

ಅಗರಬತ್ತಿ ಮಾದಪ್ಪ ಅರುಣ್ ನಟಿಸಿದ್ದರೆ ಹೀರೋ ನೀನಾಸಂ ಸತೀಶ್ ಊದುಬತ್ತಿ ಶಿವಪ್ಪನಾಗಿದ್ದಾರೆ. ಇವರೂ ಅನಾಥರೇ. ಇವರನ್ನು ಅನಾಥಾಶ್ರಮಕ್ಕೆ ತಂದುಬಿಟ್ಟವರ ಹೆಸರನ್ನೇ ಇವರಿಗೆ ಇಟ್ಟಿರ್ತಾರೆ.

ಬ್ಯೂಟಿ ಪಾರ್ಲರಿನಲ್ಲಿ ಕೆಲಸ ಮಾಡುವ ಕವಿತಾ ಕೃಷ್ಣಮೂರ್ತಿ ಪಾತ್ರದಲ್ಲಿ ಕಾರುಣ್ಯ ರಾಮ್ ನಟಿಸಿದ್ದಾರೆ.

ವಿಜಯಲಕ್ಷ್ಮಿ ಸಿಂಗ್ ಅವರ ಮೂಲಕ ಪೆಟ್ರೋಮ್ಯಾಕ್ಸ್ ಟೈಟಲ್ ಸೀಕ್ರೆಟ್ ಗೊತ್ತಾಗಲಿದೆ. ಸುಮನ್ ರಂಗನಾಥ್ ಸುಬ್ಬುಲಕ್ಷ್ಮಿಯಾಗಿ ನಟಿಸಿದ್ದಾರಂತೆ. ಅನಾಥಾಶ್ರಾಮದಿಂದ ಹೊರ ಬಂದ ನಂತರವೂ ಒಟ್ಟಿಗೇ ಬದುಕೋಣ ಎಂದು ಹೊರಡುವ ಅನಾಥ್ ಕತೆ ಪೆಟ್ರೋಮ್ಯಾಕ್ಸ್. ಆದರೆ ಸಿನಿಮಾ ಅಷ್ಟೇ ಇರಲ್ಲ.. ಸಂಥಿಂಗ್ ಸ್ಪೆಷಲ್ ಇರುತ್ತೆ. ಗೊತ್ತಾಗೋಕೆ ಪೆಟ್ರೋಮ್ಯಾಕ್ಸ್ ಹೊತ್ತಿಕೊಳ್ಳೋವರೆಗೂ ಕಾಯಬೇಕಷ್ಟೆ.