ಐಶ್ವರ್ಯಾ ರೈ ಕನ್ನಡತಿಯಾದರೂ ಕನ್ನಡ ಚಿತ್ರಗಳಲ್ಲಿ ನಟಿಸಿಲ್ಲ. ಆದರೀಗ ಪ್ಯಾನ್ ಇಂಡಿಯಾ ಸಿನಿಮಾ ಸಂಚಲನ ಶುರುವಾದ ಮೇಲೆ ಕನ್ನಡಕ್ಕೆ ಬರುತ್ತಿದ್ದಾರೆ ಐಶ್ವರ್ಯಾ ರೈ. ಅದೂ ಕೂಡಾ ಸೇಡಿನ ರಾಣಿಯಾಗಿ.
ಐಶ್ವರ್ಯಾ ರೈ, ಮಣಿರತ್ನಂ ಅವರ ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ನಟಿಸಿದ್ದಾರೆ. ಅದು ಸೇಡು ತೀರಿಸಿಕೊಳ್ಳೋ ರಾಣಿಯ ಪಾತ್ರ. ಈ ಚಿತ್ರದ ಮೂಲಕ ಸುದೀರ್ಘ ಗ್ಯಾಪ್ ನಂತರ ಮಣಿರತ್ನಂ ಕೂಡಾ ಕನ್ನಡಕ್ಕೆ ಬರುತ್ತಿದ್ದಾರೆ. 1983ರಲ್ಲಿ ಕನ್ನಡದ ಪಲ್ಲವಿ ಅನುಪಲ್ಲವಿ ಚಿತ್ರದ ಮೂಲಕ ಕೆರಿಯರ್ ಶುರು ಮಾಡಿದ ಮಣಿರತ್ನಂ, ನಂತರ ಕನ್ನಡಕ್ಕೆ ಬರಲೇ ಇಲ್ಲ. ಈಗ ಪ್ಯಾನ್ ಇಂಡಿಯಾ ಹೆಸರಲ್ಲಿ ಕನ್ನಡಕ್ಕೆ ಬರುತ್ತಿದ್ದಾರೆ ಮಣಿರತ್ನಂ. ಹೆಚ್ಚೂ ಕಡಿಮೆ 40 ವರ್ಷದ ಗ್ಯಾಪ್.
ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ವಿಕ್ರಂ, ಸೂರ್ಯ, ಜಯಂ ರವಿ, ತ್ರಿಷಾ, ಶರತ್ ಕುಮಾರ್, ಪ್ರಕಾಶ್ ರೈ ಕೂಡಾ ನಟಿಸಿದ್ದಾರೆ. ಐಶ್ವರ್ಯಾ ರೈ ಮಂದಾಕಿನಿ ಹಾಗೂ ನಂದಿನಿ ಎರಡು ಪಾತ್ರಗಳಲ್ಲಿ ನಟಿಸಿದ್ದಾರೆ. ತಾಯಿ-ಮಗಳ ಪಾತ್ರ. ಡಬಲ್ ರೋಲ್ ಎನ್ನಲಾಗಿದೆ. ಪಳವೂರಿನ ರಾಣಿ ನಂದಿನಿಯ ಕಥೆ ಇದು.