ರಣ್`ಬೀರ್ ಕಪೂರ್ ಮತ್ತು ಆಲಿಯಾ ಭಟ್ ಈಗ ಹಿಂದಿ ಚಿತ್ರರಂಗದ ಸೆಲಬ್ರಿಟಿ ಕಪಲ್. ಇವರಲ್ಲಿ ಆಲಿಯಾ ಅವರಂತೂ ಬೋಲ್ಡ್ & ಬ್ಯೂಟಿಫುಲ್. ಮುಚ್ಚುಮರೆಯಿಲ್ಲದೆ ಬಿಂದಾಸ್ ಆಗಿ ಮಾತನಾಡುವ ಆಲಿಯಾ ಮತ್ತೊಮ್ಮೆ ಅಂತಹುದೇ ಮಾತುಗಳ ಮೂಲಕ ಹುಬ್ಬೇರಿಸಿದ್ದಾರೆ. ಈ ಬಾರಿ ಆಲಿಯಾ ಭಟ್ ಮಾತನಾಡಿರೋದು ಫಸ್ಟ್ ನೈಟ್ ಬಗ್ಗೆ. ಆಲಿಯಾ ಈ ಮಾತು ಹೇಳಿರೋದು ಕರಣ್ ಜೋಹರ್ ಶೋನಲ್ಲಿ ಅನ್ನೋದು ವಿಶೇಷ.
ರಣ್ಬೀರ್ ಅವರೊಂದಿಗೆ ಮದುವೆಯಾದ ದಿನವೇ ಅವರಿಬ್ಬರಿಗೆ ಶೋಬನವೂ ಇತ್ತು. ಕರಣ್ ಕೇಳಿದ್ದು ಇಷ್ಟೆ. ಮದುವೆಯ ನಂತರ ಮದುವೆಯ ಬಗ್ಗೆ ಇದ್ದ ಯಾವ ನಂಬಿಕೆ ಸುಳ್ಳಾಯಿತು? ಅದಕ್ಕೆ ಹೇಳಿದ್ದು ಪ್ರಸ್ತದ ದಿನ ಕಥೆ. ಫಸ್ಟ್ ನೈಟ್ ದಿನ ಏನೂ ಇರೋದಿಲ್ಲ. ಆ ರಾತ್ರಿ ಏನೂ ವಿಶೇಷವಾದದ್ದು ನಡೆಯೋದಿಲ್ಲ. ಮದುವೆಯಲ್ಲಿಯೇ ಸುಸ್ತಾಗಿರುತ್ತೇವೆ. ಇನ್ನೇನು ಮಾಡೋಕೆ ಸಾಧ್ಯ. ಸುಮ್ಮನೆ ಮಲಗುತ್ತೇವೆ ಅಷ್ಟೆ..
ಶೋನಲ್ಲಿದ್ದ ರಣ್`ಬೀರ್ ಮತ್ತು ಕರಣ್ ಜೋಹರ್ ಇಬ್ಬರೂ ನಕ್ಕಿದ್ದಾರೆ. ಉಳಿದವರ ಕಥೆ ಏನು?ನ