ಇದೇ ವಾರ ರಿಲೀಸ್ ಆಗಿರೋ ಶಿವಣ್ಣ ಅಭಿನಯದ ಬೈರಾಗಿ ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಶಿವಣ್ಣ & ಡಾಲಿ ಟಗರು ನಂತರ ಒಟ್ಟಿಗೇ ನಟಿಸಿರುವ ಚಿತ್ರವಿದು. ಈ ಹಿನ್ನೆಲೆಯಲ್ಲಿ ಶಿವಣ್ಣ ಚಾಮರಾಜನಗರ ಮತ್ತು ಕೊಳ್ಳೇಗಾಲದಲ್ಲಿ ಪ್ರದರ್ಶನಗೊಳ್ಳುತ್ತಿರೋ ಚಿತ್ರಮಂದಿರಗಳಿಗೆ ಭೇಟಿ ಕೊಟ್ಟಿದ್ದಾರೆ.
ಕೊಳ್ಳೇಗಾದಲ್ಲಿ ಟೀ ಮಂಜು ಎಂದೇ ಫೇಮಸ್ ಆಗಿರುವ ಅಭಿಮಾನಿಯ ಟೀ ಹೋಟೆಲ್ಗೆ ಭೇಟಿ ಕೊಟ್ಟು ಟೀ ಕುಡಿದರು. ಅಭಿಮಾನಿಗಳಂತೂ ಎಲ್ಲೆಡೆ ನಿಂತು ಅಪ್ಪು ಅಪ್ಪು ಎಂದು ಕೂಗುತ್ತಿದ್ದರು. ಚಾಮರಾಜನಗರದಲ್ಲಿ ಅಪ್ಪು ಪುತ್ಥಳಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಶಾಸಕ ಮಹೇಶ್ ಭರಚುಕ್ಕಿ ಜಲಪಾತದ ಬಳಿಯೇ ಪುತ್ಥಳಿ ನಿರ್ಮಿಸುತ್ತಿರುವುದಾಗಿ ತಿಳಿಸಿದ್ದಾರೆ.