` ಸಂಸಾರ ಅಂದ್ರೆ ಕರಣ್ ಜೋಹರ್ ಸಿನಿಮಾ ಅಲ್ಲ.. ಕೆಜಿಎಫ್ ತರಾ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಸಂಸಾರ ಅಂದ್ರೆ ಕರಣ್ ಜೋಹರ್ ಸಿನಿಮಾ ಅಲ್ಲ.. ಕೆಜಿಎಫ್ ತರಾ..
Karan Johar, Samantha Ruth Prabhu

ಒಂದು ಮದುವೆ ಮತ್ತು ವೈವಾಹಿಕ ಜೀವನವನ್ನು ಹೀಗೂ ವಿಶ್ಲೇಷಣೆ ಮಾಡಬಹುದಾ? ಮಾಡಬಹುದು ಅಂತಾ ತೋರಿಸಿಕೊಟ್ಟಿದ್ದಾರೆ ಸಮಂತಾ ರುತ್ ಪ್ರಭು. ಸಮಂತಾ ಎಲ್ಲ ಸೌತ್ ಸ್ಟಾರ್‍ಗಳ ಹಾಗಲ್ಲ. ತಮಗೆ ಅನ್ನಿಸಿದ್ದನ್ನು ಓಪನ್ ಆಗಿ ಹೇಳೋ ಸ್ವಭಾವದವರು. ಈ ಬಾರಿಯೂ ಅಷ್ಟೆ. ಸಮಂತಾ ಈಗ ಹಿಂದಿಯಲ್ಲಿ ನಟಿಸುತ್ತಿರೋದ್ರಿಂದ ಕರಣ್ ಜೋಹರ್ ಶೋಗೆ ಹೋಗಿದ್ದಾರೆ. ಅಲ್ಲಿ ಎಂದಿನಂತೆ ಸಮಂತಾ ಅವರ ಲವ್ ಸ್ಟೋರಿ-ಮ್ಯಾರೇಜ್-ಬ್ರೇಕಪ್-ಡೈವೋರ್ಸ್ ವಿಷಯ ಪ್ರಸ್ತಾಪವಾಗಿದೆ. ಆಗ ಸಮಂತಾ ಹೇಳಿರೋ ಕಥೆಯೇ ಇದು.

ನನ್ನ ಮದುವೆಗೆ ನಿಮ್ಮ ಸಿನಿಮಾಗಳೇ ಕಾರಣ. ನೀವು ಸಿನಿಮಾದಲ್ಲಿ ಮದುವೆ..ಸಂಸಾರ ಅಂದ್ರೆ ಕಭಿ ಖುಷಿ ಕಭಿ ಘಮ್ ಅನ್ನೋ ತರ ತೋರಿಸ್ತೀರಿ. ಇಷ್ಟೇ ಅಲ್ವಾ.. ಅನ್ನೋ ಥ್ರಿಲ್‍ನಲ್ಲಿ ಮದುವೆ ಆದರೆ ಅಲ್ಲಿ ಸಿಗೋದು ಕೆಜಿಎಫ್ ಎಂದಿದ್ದಾರೆ ಸಮಂತಾ.

ಕೆಜಿಎಫ್`ನಲ್ಲಿರೋದು ರಕ್ತಸಿಕ್ತ ಗುಂಡಿನ ಸುರಿಮಳೆಗಳ ಕಥೆ. ಅಂದ್ರೆ.. ನಿಜಕ್ಕೂ ನಾಗಚೈತನ್ಯ ಜೊತೆಗಿನ ಲೈಫು ಅಷ್ಟು ಭಯಂಕರವಾಗಿತ್ತಾ? ಕಲ್ಪನೆ ನಿಮ್ಮದು.