` ಡಾಲಿ ಸಾಹಿತ್ಯದ ಹಾಡು ಕೇಳಿದ್ರಾ? ಹೇಗಿದೆ? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಡಾಲಿ ಸಾಹಿತ್ಯದ ಹಾಡು ಕೇಳಿದ್ರಾ? ಹೇಗಿದೆ?
Orchestra Mysore

ಡಾಲಿ ಧನಂಜಯ್ ಹೀರೋ ಅಷ್ಟೇ ಅಲ್ಲ, ನಿರ್ಮಾಪಕರಷ್ಟೇ ಅಲ್ಲ.. ಅವರೊಳಗೊಬ್ಬ ಕವಿ ಕಮ್ ಸಾಹಿತಿಯೂ ಇದ್ದಾರೆ. ಸಿಕ್ಕಾಪಟ್ಟೆ ಪುಸ್ತಕ ಓದುತ್ತಾರೆ. ತಿರುಗುತ್ತಾರೆ. ರಂಗಭೂಮಿಯ ಅನುಭವವೂ ಇದೆ. ನೋವಿನ ಹಿನ್ನೆಲೆಯಿದೆ. ಅವಮಾನದ ಚರಿತ್ರೆಯೂ ಇದೆ. ಗೆಲುವಿನ ಕಿರೀಟವನ್ನೂ ತೊಟ್ಟಾಗಿದೆ. ಇಷ್ಟೆಲ್ಲ ಇದ್ದ ಮೇಲೆ ಸಾಹಿತ್ಯಕ್ಕೆ ಬೇಕಾದ ಸಕಲ ಸರಕಗಳೂ ಸಿಕ್ಕಂತಲ್ಲವೇ. ಹೀಗಾಗಿಯೇ ಡಾಲಿ ಧನಂಜಯ್ ಹಾಡಿಗೆ ಅಕ್ಷರ ಜೋಡಿಸಿದ್ದಾರೆ. ಆರ್ಕೆಸ್ಟ್ರಾ ಮೈಸೂರು ಚಿತ್ರದ ಎಲ್ಲ ಹಾಡುಗಳಿಗೂ ಡಾಲಿಯವರದ್ದೇ ಸಾಹಿತ್ಯ.

ಸಂಗೀತ ಸಾಗರ.. ಈ ಗಾಂಧಿನಗರ.. ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ. ಈ ಚಿತ್ರವನ್ನು ಕೆಆರ್‍ಜಿ ಸ್ಟುಡಿಯೋಸ್ ಮತ್ತು ಡಾಲಿ ಪಿಕ್ಚರ್ಸ್ ಜಂಟಿಯಾಗಿ ನಿರ್ಮಿಸಿರುವುದು ವಿಶೇಷ. ಸಿಂಗರ್ ನವೀನ್ ಸಜ್ಜು ಮತ್ತು ಡೈರೆಕ್ಟರ್ ಸುನಿಲ್ ಮೈಸೂರು ಇಬ್ಬರೂ ಸೇರಿ ಬರೆದಿರುವ ಕಥೆ ಇದು. ಮೈಸೂರಿನ ಹುಡುಗರನ್ನೇ ಹಾಕಿಕೊಂಡು ತಯಾರಾಗಿರೋ ಚಿತ್ರಕ್ಕೆ ಡಾಲಿಯ ಗೆಳೆಯ ಪೂರ್ಣಚಂದ್ರ ಹೀರೋ.

ಇತ್ತೀಚಿನ ಎಲ್ಲ ಹಾಡುಗಳಿಗಿಂತ ಈ ಹಾಡು ವಿಭಿನ್ನ ಅನ್ನಿಸೋಕೆ ಕಾರಣ ಇದೆ. ಇದರಲ್ಲಿ ಪಕ್ಕಾ ಆರ್ಕೆಸ್ಟ್ರಾ ಫೀಲಿಂಗ್ ಇದೆ. ಹಾಡು ಕೇಳಿ.. ಕೇಳಲು ಮರೆಯದಿರಿ.. ಮರೆತು ನಿರಾಶರಾಗದಿರಿ..