ಹೊಯ್ಸಳ ಸಿನಿಮಾ ಶೂಟಿಂಗ್ ಶುರುವಾಗಿದೆ. ಮೈಸೂರಿನಲ್ಲಿ. ಇದು ಡಾಲಿ ಧನಂಜಯ್ ಸಿನಿಮಾ. ಕಾರ್ತಿಕ್ ಗೌಡ ಮತ್ತು ಯೋಗಿ ಬಿ.ರಾಜ್ ಜಂಟಿಯಾಗಿ ನಿರ್ಮಿಸುತ್ತಿರೋ ಹೊಯ್ಸಳ ಚಿತ್ರದಲ್ಲಿ ಡಾಲಿ ಮತ್ತೊಮ್ಮೆ ಪೊಲೀಸ್ ಆಫೀಸರ್ ಆಗಿದ್ದಾರೆ. ಡಾಲಿ ಪಾತ್ರದ ಹೆಸರೇ ಗುರುದೇವ ಹೊಯ್ಸಳ.
ನಟ ರಾಕ್ಷಸ ಡಾಲಿ ಈ ಚಿತ್ರದ ಪಾತ್ರಕ್ಕಾಗಿ ಸ್ವಲ್ಪ ತೂಕ ಇಳಿಸಿಕೊಂಡು ಸಣ್ಣಗಾಗಿದ್ದಾರೆ. ಧನಂಜಯ್ ಜೊತೆ ಲಕ್ಕಿ ಹೀರೋಯಿನ್ ಆಗಿರೋ ಅಮೃತಾ ಅಯ್ಯಂಗಾರ್ ನಟಿಸುತ್ತಿರೋದು ವಿಶೇಷ. ಗಣೇಶ್ ಅವರ ಗೀತಾ ಚಿತ್ರದ ಮೂಲಕ ಗಮನ ಸೆಳೆದಿದ್ದ ವಿಜಯ್ ನಾಗೇಂದ್ರ ಈ ಚಿತ್ರಕ್ಕೆ ಡೈರೆಕ್ಟರ್.
ಚಿತ್ರದಲ್ಲಿ ಅಚ್ಯುತ್ ಕುಮಾರ್, ನವೀನ್ ಶಂಕರ್, ಪ್ರತಾಪ್ ನಾರಾಯಣ್, ಅವಿನಾಶ್ ಕೆ.ಜಿ.ಎಫ್, ರಾಘು ಶಿವಮೊಗ್ಗ ಮೊದಲಾದವರು ನಟಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿರುವ ಚಿತ್ರವಿದು.