` ಜೇಮ್ಸ್ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಔಟ್ ಆಫ್ ಡೇಂಜರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಜೇಮ್ಸ್ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಔಟ್ ಆಫ್ ಡೇಂಜರ್
Kishore Pattikonha

ಪವರ್ ಸ್ಟಾರ್  ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಸಿನಿಮಾ ಜೇಮ್ಸ್ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಕೋಮಾದಲ್ಲಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹೈ ಬಿಪಿಯಿಂದಾಗಿ ಕಿಶೋರ್ ಅವರಿಗೆ ಬ್ರೇನ್‌ ಸ್ಟ್ರೋಕ್ ಆಗಿದೆ ಎಂಬ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿತ್ತು. ಬೆಂಗಳೂರಿನ ಶೇಷಾದ್ರಿಪುರದಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಕಿಶೋರ್ ಪತ್ತಿಕೊಂಡ ಅವರನ್ನು ದಾಖಲಿಸಲಾಗಿತ್ತು. ಈಗ ಗುಡ್ ನ್ಯೂಸ್ ಸಿಕ್ಕಿದೆ. ಕಿಶೋರ್ ಪತ್ತಿಕೊಂಡ ಅವರಿಗೆ ಮೆದುಳಿನ ಆಪರೇಷನ್ ಆಗಿದ್ದು, ಕಿಶೋರ್ ಔಟ್ ಆಫ್ ಡೇಂಜರ್ ಎಂದು ಗೊತ್ತಾಗಿದೆ.

ಕಿಶೋರ್ ಅವರು ಮೂಲತಃ ಬಳ್ಳಾರಿಯ ಹೊಸಪೇಟೆಯವರು. ಪುನೀತ್ ಎಂದರೆ ಅಪಾರ ಅಭಿಮಾನ ಹೊಂದಿದ್ದರು. ಹೊಸಪೇಟೆಯಲ್ಲಿ  ಥಿಯೇಟರ್ ಮಾಲೀಕರಾಗಿದ್ದ ಕಿಶೋರ್ ಅವರಿಗೆ ಅಪ್ಪುಗಾಗಿ ಸಿನಿಮಾ ಮಾಡುವ ಕನಸಿತ್ತು.ಅದನ್ನು ಈಡೇರಿಸಿಕೊಂಡಿದ್ದರೂ ಕೂಡಾ. ಪುನೀತ್ ಅಗಲಿಕೆ ನೋವಿನಲ್ಲಿಯೇ ಸಿನಿಮಾ ಹಿಟ್ ಆಗಿತ್ತು. 100 ಕೋಟಿ ಕ್ಲಬ್ ಸೇರಿತ್ತು. ಅದಕ್ಕೂ ಮೊದಲು ಕಿಶೋರ್ ಪತ್ತಿಕೊಂಡ ಅವರ ಕುಟುಂಬ ಶಿವಣ್ಣನವರ ಸಂತೆಯಲ್ಲಿ ನಿಂತ ಕಬೀರ ಚಿತ್ರ ನಿರ್ಮಾಣ ಮಾಡಿತ್ತು.ಇದಾದ ನಂತರ ರಾಮ್ಕುಮಾರ್ ಪುತ್ರ ಧಿರೇನ್ ಅವರಿಗಾಗಿ ಹೊಸ ಸಿನಿಮಾ ಘೋಷಣೆ ಮಾಡಿದ್ದರು ಕಿಶೋರ್ ಪತ್ತಿಕೊಂಡ.