` ಕ್ರಿಕೆಟ್ ಆಟಗಾರನಾದ ಗೋಲ್ಡನ್ ಸ್ಟಾರ್ ಗಣೇಶ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕ್ರಿಕೆಟ್ ಆಟಗಾರನಾದ ಗೋಲ್ಡನ್ ಸ್ಟಾರ್ ಗಣೇಶ್
Baanadaariyalli Movie Image

ಕ್ರಿಕೆಟ್ ಆಟಗಾರ ಗಣೇಶ್ ಎಂದರೆ ಕನ್ನಡಿಗರಿಗೆ ನೆನಪಾಗೋದು ವೇಗದ ಬೌಲರ್ ದೊಡ್ಡ ಗಣೇಶ್. ಅವರ ವೇಗದ ಎಸೆತಗಳು ಬ್ಯಾಟ್ಸ್‍ಮನ್`ಗಳ ನಿದ್ದೆಕೆಡಿಸಿದ್ದವು. ಅವರನ್ನು ಬಿಟ್ಟರೆ ಇನ್ನೊಬ್ಬ ಗಣೇಶ್ ಹೆಸರಿನ ಕ್ರಿಕೆಟ್ ಆಟಗಾರ ಗಣೇಶ್ ಸತೀಶ್. ಆದರೆ, ಈಗ ಇನ್ನೊಬ್ಬ ಆಟಗಾರ ಬಂದಿದ್ದಾರೆ. ಅವರು ಗಣೇಶ್. ಬ್ಯಾಟ್ಸ್‍ಮನ್. ಅವರನ್ನು ಫ್ಯಾನ್ಸ್ ಗೋಲ್ಡನ್ ಸ್ಟಾರ್ ಎಂದು ಕರೆಯುತ್ತಾರೆ.

ಗಣೇಶ್ ಅವರನ್ನು ಕ್ರಿಕೆಟರ್ ಮಾಡಿರೋ ಕೋಚ್ ಹೆಸರು ಪ್ರೀತಂಗುಬ್ಬಿ. ಬಾನದಾರಿಯಲ್ಲಿ ಗಣೇಶ್ ಅವರಿಗೆ ಕ್ರಿಕೆಟ್ ಆಟಗಾರನ ವೇಷ ಹಾಕಿಸುತ್ತಿದ್ದಾರೆ ಪ್ರೀತಂ. ಅದಕ್ಕಾಗಿ ಈಗಾಗಲೇ ಗಣೇಶ್ ಪ್ರಾಕ್ಟೀಸ್ ಕೂಡಾ ಮಾಡುತ್ತಿದ್ದಾರಂತೆ.

ಸದ್ಯಕ್ಕೆ 15 ದಿನಗಳ ಶೂಟಿಂಗ್ ಮುಗಿದಿದೆ. ಉಳಿದ ಭಾಗದ ಶೂಟಿಂಗ್ ದ.ಆಫ್ರಿಕಾದಲ್ಲಿ ನಡೆಯಬೇಕು. ಇದರ ನಡುವೆ ಗಣೇಶ್ ಅವರ ಗಾಳಿಪಟ 2 ರಿಲೀಸ್ ಇದೆ. ಹೀಗಾಗಿ ಆಗಸ್ಟ್‍ನಲ್ಲಿ ಅಲ್ಲಿ ಚಿತ್ರೀಕರಣ ಶುರುವಾಗಲಿದೆ. ಗಣೇಶ್`ಗೆ ಜೋಡಿಯಾಗಿ ರುಕ್ಮಿಣಿ ವಸಂತ್ ಹಾಗೂ ರೀಷ್ಮಾ ನಾಣಯ್ಯ ನಟಿಸುತ್ತಿದ್ದಾರೆ. ಪ್ರೀತಂ ಗುಬ್ಬಿ ಜೊತೆಯಲ್ಲಿ ಈ ಬಾರಿ ಸಂಗೀತ ನೀಡುವುದಕ್ಕೆ ಹರಿಕೃಷ್ಣ ಕೂಡಾ ಜೊತೆಗೂಡಿದ್ದಾರೆ.