` ಹರ್ಷಿಕಾ-ಭುವನ್ ಜೋಡಿಗೆ ಮದರ್ ಥೆರೇಸಾ ಅವಾರ್ಡ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಹರ್ಷಿಕಾ-ಭುವನ್ ಜೋಡಿಗೆ ಮದರ್ ಥೆರೇಸಾ ಅವಾರ್ಡ್
ಹರ್ಷಿಕಾ-ಭುವನ್ ಜೋಡಿಗೆ ಮದರ್ ಥೆರೇಸಾ ಅವಾರ್ಡ್

ಕೊರೊನಾ ಸಮಯದಲ್ಲಿ ಚಿತ್ರರಂಗದ ಹಲವರು ಸಂಕಟದಲ್ಲಿದ್ದ ಜನಸಾಮಾನ್ಯರಿಗೆ ಸ್ಪಂದಿಸಿದರು. ನೇರವಾಗಿ ಫೀಲ್ಡಿಗೇ ಇಳಿದವರಲ್ಲಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಜೋಡಿ ಮುಂಚೂಣಿಯಲ್ಲಿತ್ತು. ಸಾವಿರಾರು ಜನರಿಗೆ ಊಟ, ¾ನ್ ಕಿಟ್ ಕೊಟ್ಟಿದ್ದಷ್ಟೇ ಅಲ್ಲ.. ಮೆಡಿಸಿನ್, ಆಂಬುಲೆನ್ಸ್ ಹೀಗೆ ತಮ್ಮಿಂದ ಸಾಧ್ಯವಾದ ಎಲ್ಲ ನೆರವನ್ನೂ ನೀಡಿದ್ದರು. ಬೆಂಗಳೂರು ಮತ್ತು ಮಡಿಕೇರಿಯಲ್ಲಿ ದೊಡ್ಡ ಮಟ್ಟದಲ್ಲಿಯೇ ನೊಂದವರ ಕಷ್ಟಕ್ಕೆ ಸ್ಪಂದಿಸಿದ್ದರು.

ಈ ಸೇವೆಯನ್ನು ದಿ ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಸಂಸ್ಥೆಗಳು ಗುರುತಿಸಿವೆ. ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಅವರಿಗೆ ಮದರ್ ಥೆರೇಸಾ ರಾಷ್ಟ್ರೀಯ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಿವೆ.