` ಮಂಗಳೂರಿನ ಸಿನಾ ಶೆಟ್ಟಿ ಮಿಸ್ ಇಂಡಿಯಾ : ಐಶ್ವರ್ಯಾ ರೈ ಹಾದಿಯಲ್ಲಿ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಮಂಗಳೂರಿನ ಸಿನಾ ಶೆಟ್ಟಿ ಮಿಸ್ ಇಂಡಿಯಾ : ಐಶ್ವರ್ಯಾ ರೈ ಹಾದಿಯಲ್ಲಿ..
Sini Shetty

ಕರ್ನಾಟಕದ ಹುಡುಗಿ ಸಿನಾ ಶೆಟ್ಟಿ ಈ ಬಾರಿಯ ಮಿಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡದ ಹುಡುಗಿ ಸಿನಿ ಶೆಟ್ಟಿ, ಹುಟ್ಟಿದ್ದು, ಬೆಳೆದಿದ್ದು ಎಲ್ಲವೂ ಮುಂಬೈನಲ್ಲೇ. ಭರತ ನಾಟ್ಯ ಕಲಾವಿದೆಯೂ ಆಗಿರುವ ಸಿನಾ ಶೆಟ್ಟಿ ಈ ಬಾರಿಯ ಮಿಸ್ ವಲ್ರ್ಡ್ ಸ್ಪರ್ಧೆಗೆ ಇಂಡಿಯಾದಿಂದ ಸ್ಪರ್ಧಿಸಲಿದ್ದಾರೆ.

ಮಿಸ್ ವಲ್ರ್ಡ್ ಸ್ಪರ್ಧೆಗೆ ಹೋದರೆ ಐಶ್ವರ್ಯಾ ರೈ ನಂತರ ಮಿಸ್ ವಲ್ರ್ಡ್ ಸ್ಪರ್ಧಿಸಿದ 2ನೇ ಕನ್ನಡತಿಯಾಗಲಿದ್ದಾರೆ ಸಿನಾ ಶೆಟ್ಟಿ. ಐಶ್ವರ್ಯಾ ರೈ ಅವರಂತೆಯೇ ಮಿಸ್ ವಲ್ರ್ಡ್ ಪಟ್ಟ ಅಲಂಕರಿಸುತ್ತಾರಾ..? ಕಾದು ನೋಡಬೇಕು.