` ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಅಮೃತಾ ನಾಯ್ಡುಗೆ ಗಂಡು ಮಗು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಅಮೃತಾ ನಾಯ್ಡುಗೆ ಗಂಡು ಮಗು
ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಅಮೃತಾ ನಾಯ್ಡುಗೆ ಗಂಡು ಮಗು

ನನ್ನಮ್ಮ ಸೂಪರ್ ಸ್ಟಾರ್ ಶೋ ಮೂಲಕ ಕನ್ನಡದ ಮನೆ ಮನೆಗೂ ಪರಿಚಿತರಾದವರು ಅಮೃತಾ ನಾಯ್ಡು. ಅಮೃತಾ ನಾಯ್ಡು ಅವರೊಂದಿಗೆ ಅವರ ಪುಟ್ಟ ಮಗಳು ಸಮನ್ವಿ ಕರ್ನಾಟಕದ ಟಿವಿ ವೀಕ್ಷಕರ ಮನ ಗೆದ್ದಿದ್ದಳು. ಕೆಲವು ತಿಂಗಳ ಹಿಂದೆ ಅಪಘಾತದಲ್ಲಿ ಸಮನ್ವಿ ಮೃತಪಟ್ಟಾಗ ಇಡೀ ಕರುನಾಡು ಅಮೃತಾ ಅವರೊಂದಿಗೆ ಕಣ್ಣೀರಿಟ್ಟಿತು. ಈಗ ಅಮೃತಾ ನಾಯ್ಡು ಅವರಿಗೆ ಗಂಡು ಮಗು ಹುಟ್ಟಿದೆ.

ಪರಿ ರೂಪೇಶ್ ಅವರೊಂದಿಗೆ ಇರುವ ಫೋಟೋ ಪೋಸ್ಟ್ ಮಾಡಿರುವ ಅಮೃತಾ ನಾಯ್ಡು ದುಃಖದ ಸಂದರ್ಭದಲ್ಲಿ ನನ್ನೊಂದಿಗೆ ಇದ್ದ ಎಲ್ಲರಿಗೂ ಧನ್ಯವಾದಗಳು. ಬದುಕಿನಲ್ಲಿ ಹೊಸ ಆರಂಭವಾಗಿದೆ. ಗಂಡು ಮಗು ಪಡೆದಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಜನವರಿ 3ರಂದು ಬೆಂಗಳೂರಿನ ವಾಜರಹಳ್ಳಿಯಲ್ಲಿ ಅಪಘಾತ ಸಂಭವಿಸಿತ್ತು. ಮಗಳು ಸಮನ್ವಿ ಜೊತೆ ಟೂ ವೀಲರಿನಲ್ಲಿ ಹೋಗುತ್ತಿದ್ದಾಗ ಆಕ್ಸಿಡೆಂಟ್ ಆಗಿತ್ತು. ಗರ್ಭಿಣಿಯಾಗಿದ್ದ ಅಮೃತಾ ನಾಯ್ಡು ಪ್ರಾಣಾಪಾಯದಿಂದ ಪಾರಾಗಿದ್ದರೆ, ಸಮನ್ವಿ ಮೃತಪಟ್ಟಿದ್ದಳು.