ನವರಸನಾಯಕ ಜಗ್ಗೇಶ್ ಅಭಿನಯದ ತೋತಾಪುರಿ ರಿಲೀಸ್ ಆಗೋಕೆ ಸಮಯ ಕೂಡಿ ಬಂದಿದೆ. ಸೆಪ್ಟೆಂಬರ್ 30ರಂದು ಸಿನಿಮಾ ರಿಲೀಸ್ ಮಾಡೋದಾಗಿ ಘೋಷಿಸಿದ್ದಾರೆ. ಅದೇ ದಿನ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಹಾಗೂ ರಿಷಬ್ ಶೆಟ್ಟಿಯವರ ಕಾಂತಾರಾ ರಿಲೀಸ್ ಆಗುತ್ತಿವೆ.
ಅದು ದಸರಾ ರಜೆ ಸಮಯ. ಹೀಗಾಗಿ ರಿಲೀಸ್ ಮಾಡುತ್ತಿದ್ದೇವೆ ಎಂದಿದ್ದಾರೆ ನಿರ್ಮಾಪಕ ಸುರೇಶ್.
ವಿಜಯ್ ಪ್ರಸಾದ್ ನಿರ್ದೇಶನದ ತೋತಾಪುರಿ ಎರಡು ಭಾಗಗಳಲ್ಲಿ ಬರುತ್ತಿದ್ದು, ಮೊದಲ ಭಾಗ ಸೆ.30ಕ್ಕೆ ರಿಲೀಸ್ ಆಗುತ್ತಿದೆ. ಆಗಸ್ಟ್ 5ಕ್ಕೆ ಜಗ್ಗೇಶ್ ಅವರ ರಾಘವೇಂದ್ರ ಸ್ಟೋರ್ಸ್ ರಿಲೀಸ್ ಆಗುತ್ತಿದ್ದು, ಆ ಸಿನಿಮಾ ರಿಲೀಸ್ ಆದ ಸರಿಯಾಗಿ 50 ದಿನಗಳ ನಂತರ ತೋತಾಪುರಿ ಬರಲಿದೆ.
ತೋತಾಪುರಿಯಲ್ಲಿ ಜಗ್ಗೇಶ್ ಅವರ ಜೊತೆ ಡಾಲಿ ಧನಂಜಯ್ ಕೂಡಾ ನಟಿಸಿದ್ದಾರೆ. ಅದಿತಿ ಪ್ರಭುದೇವ ನಾಯಕಿ. ಸುಮನ್ ರಂಗನಾಥ್, ದತ್ತಣ್ಣ ಇನ್ನಿತರ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಒಟ್ಟಿನಲ್ಲಿ ಸೆ.30ಕ್ಕೆ ಧ್ರುವ ಸರ್ಜಾ-ಎ.ಪಿ.ಅರ್ಜುನ್-ಉದಯ್ ಕೆ.ಮೆಹ್ತಾ ಜೋಡಿಯ ಮಾರ್ಟಿನ್, ರಿಷಬ್ ಶೆಟ್ಟಿ-ಹೊಂಬಾಳೆ ಜೋಡಿಯ ಕಾಂತಾರಾ ಜೊತೆ ಜಗ್ಗೇಶ್-ವಿಜಯ್ ಪ್ರಸಾದ್-ಕುಮಾರ್ ಜೋಡಿಯ ತೋತಾಪುರಿ.. ಮೂರ್ ಮೂರು ಸಿನಿಮಾಗಳು ಒಟ್ಟೊಟ್ಟಿಗೆ ಬರಲಿವೆ.