ಇದೀಗ ಸುದ್ದಿಯಲ್ಲಿರುವ ನಟಿ ಪವಿತ್ರಾ ಲೋಕೇಸ್. ತೆಲುಗು ನಟ ನರೇಶ್ ಜೊತೆ ಮದುವೆಯಾಗಿದ್ದಾರೆ ಎಂದು ಸುದ್ದಿಯಾಗಿತ್ತು.ನರೇಶ್ ಅವರ 3ನೇ ಪತ್ನಿ ರಮ್ಯಾ ರಘುಪತಿ ಚಾನೆಲ್ಲುಗಳಲ್ಲಿ ಕುಳಿತು ಪವಿತ್ರಾ ವಿರುದ್ಧ ಹಲವು ಆರೋಪ ಮಾಡಿದ್ದರು. ನಟ ನರೇಶ್ ಕೂಡಾ ಕನ್ನಡ ಟಿವಿ ಚಾನೆಲ್ಲುಗಳಿಗೆ ಬಂದು ಉತ್ತರ ಕೊಟ್ಟಿದ್ದರು. ಆಗ ಎದ್ದಿರುವ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ ಪವಿತ್ರಾ ಲೋಕೇಶ್.
ಪ್ರಶ್ನೆ : ನೀವು ನರೇಶ್ ಜೊತೆ ಮದುವೆ ಆಗಿದ್ದೀರಾ?
ಪವಿತ್ರಾ ಲೋಕೇಶ್ : ಮದುವೆ ಆಗಿರೋದಕ್ಕೆ ನಿಮ್ಮ ಬಳಿ ದಾಖಲೆ ಏನಿದೆ?
ಪ್ರಶ್ನೆ : ನೀವು ಸುಚೇಂದ್ರ ಪ್ರಸಾದ್ ಅವರಿಗೆ ಡೈವೋರ್ಸ್ ಕೊಟ್ಟಿದ್ದೀರಾ?
ಪವಿತ್ರಾ ಲೋಕೇಶ್ : ನಾವಿಬ್ಬರೂ ಮದುವೆಯೇ ಆಗಿಲ್ಲ. ಒಟ್ಟಿಗೆ ಇದ್ದೆವು. ಮದುವೆಯೇ ಆಗಿಲ್ಲ ಎಂದ ಮೇಲೆ ಡೈವೋರ್ಸ್ ಯಾಕೆ?
ಪ್ರಶ್ನೆ : ನೀವು ನರೇಶ್ ಅವರ ಸಂಸಾರವನ್ನು ಹಾಳು ಮಾಡಿದ್ದೀರಂತೆ..
ಪವಿತ್ರಾ ಲೋಕೇಶ್ : ಅದು ನನಗೆ ಸಂಬಂಧಪಟ್ಟ ವಿಷಯ ಅಲ್ಲ.
ಪ್ರಶ್ನೆ : ನಿಮಗೆ ದುಡ್ಡಿನ ಮೇಲೆ ವ್ಯಾಮೋಹ ಜಾಸ್ತಿ ಎಂದಿದ್ದಾರೆ ಸುಚೇಂದ್ರ ಪ್ರಸಾದ್
ಪವಿತ್ರಾ ಲೋಕೇಶ್ : ನಾನು ಅವರು ಒಟ್ಟಿಗೇ ಇದ್ದಾಗ ಅವರಿಗೆ ಮನೆಯೂ ಇರಲಿಲ್ಲ. ಹಣವೂ ಇರಲಿಲ್ಲ. ಕಾರೂ ಇರಲಿಲ್ಲ. ಅವರನ್ನು ನಾನು ದುಡ್ಡಿನಿಂದ ಅಳೆದಿದ್ದರೆ ಅವರ ಜೊತೆ 11 ವರ್ಷ ಇರುತ್ತಿರಲಿಲ್ಲ.
ಪ್ರಶ್ನೆ : ಮದುವೆ ಆಗದೆ ಸುಚೇಂದ್ರ ಪ್ರಸಾದ್ ಅವರ ಜೊತೆ ಇದ್ರಾ? ಮದುವೆ ಆಗಬೇಕು ಎನಿಸಲಿಲ್ವಾ?
ಪವಿತ್ರಾ ಲೋಕೇಶ್ : ನಾನು ಅವರ ಜೊತೆ ಇದ್ದೆ, ನಿಜ. ಆದರೆ ಮದುವೆ ಆಗದೇ ಇರೋದಕ್ಕೆ ಅವರೇ ಕಾರಣ. ಅವರ ಬಗ್ಗೆ ನನಗೆ ಗೌರವ ಇದೆ. ಬಹಳಷ್ಟು ಓದಿಕೊಂಡಿದ್ದಾರೆ. ಆದರೆ, ನಾವಿಬ್ಬರೂ 2017ರಿಂದ ಬೇರೆ ಇದ್ದೇವೆ. ಅವರ ಬಗ್ಗೆ ನಾನು ಹೆಚ್ಚುಮಾತನಾಡಲ್ಲ. ಅದು ಪರ್ಸನಲ್.
ಪ್ರಶ್ನೆ : ನೀವು ನರೇಶ್ ಅವರ ಜೊತೆ ಹಣಕ್ಕಾಗಿ ಇದ್ದೀರಿ ಅನ್ನೋ ಆರೋಪ ಇದೆ.
ಪವಿತ್ರಾ ಲೋಕೇಶ್ : ನನ್ನ ಬಳಿ 2 ಕಾರು, ಬಂಗಲೆ, ಚಿನ್ನ ಎಲ್ಲ ಇದೆ. ತೆಲುಗಿನಲ್ಲೇ 150 ಸಿನಿಮಾ ಮಾಡಿದ್ದೇನೆ. ಕನ್ನಡದಲ್ಲೂ ನಟಿಸಿದ್ದೇನೆ.
ಪ್ರಶ್ನೆ : ನಿಮ್ಮ ಕಾರಣಕ್ಕಾಗಿಯೇ ನರೇಶ್ ಡೈವೋರ್ಸ್ ಪಡೆಯುತ್ತಿದ್ದಾರಾ?
ಪವಿತ್ರಾ ಲೋಕೇಶ್ : ಗೊತ್ತಿಲ್ಲ. ಅದು ನನಗೆ ಸಂಬಂಧಪಟ್ಟಿದ್ದಲ್ಲ. ನರೇಶ್ ಅವರೇ ಅದನ್ನ ನೋಡಿಕೊಳ್ತಾರೆ.
ಪ್ರಶ್ನೆ : ನಿಮ್ಮ ಮತ್ತು ನರೇಶ್ ಅವರು ತುಂಬಾ ಕ್ಲೋಸ್ ಅಂತಾರೆ ರಮ್ಯಾ ರಘುಪತಿ. ಇದಕ್ಕೇನು ಹೇಳ್ತೀರಾ?
ಪವಿತ್ರಾ ಲೋಕೇಶ್ : ಒಂದು ಗಂಡು ಹೆಣ್ಣು ಒಟ್ಟಿಗೇ ಇದ್ರೆ ಮದುವೆ ಆಗಲೇಬೇಕಾ? ಕ್ಲೋಸ್ ಆಗಿ ಇರಲೇಬಾರದಾ? ಅವರ ಗಂಡನ ವಿಚಾರ ಅವರ ಮನೆಯಲ್ಲಿ ಬಗೆಹರಿಸಿಕೊಳ್ಳಬೇಕು. ನನ್ನನ್ಯಾಕೆ ಎಳೆದು ತರ್ತಾರೆ?
ಪ್ರಶ್ನೆ : ನಿಮಗೆ ನರೇಶ್, ರಮ್ಯಾ ಅವರ ನೆಕ್ಲೆಸ್ ಕೊಟ್ಟಿದ್ದಾರಂತೆ..
ಪವಿತ್ರಾ ಲೋಕೇಶ್ : ಅದನ್ನು ರಮ್ಯಾ ಅವರ ಗಂಡನ ಜೊತೆ ಕೇಳಬೇಕು. ನನ್ನ ಬಳಿ ಚಿನ್ನ, ಒಡವೆ ಇದೆ. ನಾನು ತೆಗೆದುಕೊಂಡಿರೋ ಪ್ರತಿ ಒಡವೆಗೂ ದಾಖಲೆ ಇದೆ. ನಾನು ಇದುವರೆಗೆ ಮೈಸೂರು ಬಿಟ್ಟು ಹೊರಗೆ ಯಾವುದೇ ಆಭರಣ ಖರೀದಿ ಮಾಡಿಲ್ಲ. ನನಗೆ ಇಲ್ಲಿನ ಕೆಲವು ಚಿನ್ನದಂಗಡಿಯವರ ಮೇಲೆ ನಂಬಿಕೆ ಇದೆ. ಅವರ ಬಳಿಯೇ ಖರೀದಿಸ್ತೇನೆ.
ಪ್ರಶ್ನೆ : ಹಾಗಾದರೆ ನಿಮ್ಮ ಮೇಲೆ ಯಾಕೆ ಈ ರೀತಿ ಆರೋಪ ಮಾಡ್ತಿದ್ಧಾರೆ?
ಪವಿತ್ರಾ ಲೋಕೇಶ್ : ನಟಿಸೋದು ನನ್ನ ವೃತ್ತಿ. ನರೇಶ್ ಅವರು ನನಗೆ ನಾಲ್ಕೈದು ವರ್ಷದಿಂದ ಪರಿಚಯ. ಅವರ ಜೊತೆ ನಾಲ್ಕೈದು ಸಿನಿಮಾ ಮಾಡಿರಬಹುದು. ಅವರು ತಮ್ಮ ಹಲವು ನೋವುಗಳನ್ನು ನನ್ನ ಜೊತೆ ಹಂಚಿಕೊಂಡಿದ್ದಾರೆ. ಅಷ್ಟೆ. ನನ್ನ ವ್ಯಕ್ತಿತ್ವದ ಬಗ್ಗೆ ಇಲ್ಲಿನವರಿಗೆ ಗೊತ್ತಿಲ್ವಾ?
ಪ್ರಶ್ನೆ : ನಿಮಗೆ ಅನ್ಯಾಯವಾಗಿದೆಯಾ?
ಪವಿತ್ರಾ ಲೋಕೇಶ್ : ನನಗೆ ಸಂಬಂಧವೇ ಇಲ್ಲದ ವಿಷಯದಲ್ಲಿ ನನ್ನ ಹೆಸರು ಎಳೆದು ತಂದಿದ್ದಾರೆ. ನನ್ನ ತೇಜೋವಧೆ ಮಾಡುತ್ತಿದ್ದಾರೆ. ಆದರೆ ಅದಕ್ಕಾಗಿ ಯಾರನ್ನೂ ದೂರೋದಿಲ್ಲ. ಮಾಧ್ಯಮಗಳಿಂದ ನ್ಯಾಯ ಕೊಡಿಸೋಕೆ ಆಗಲ್ಲ. ಈಗ ಕಂಪ್ಲೇಂಟ್ ಕೊಟ್ಟಿದ್ಧೇನೆ. ನನ್ನ ಸಮಸ್ಯೆ ನಾನೇ ಹೋರಾಡುತ್ತೇನೆ.
ಪ್ರಶ್ನೆ : ನಿಮ್ಮ ವಿರುದ್ಧ ಸಂಚು ನಡೆದಿದೆಯಾ?
ಪವಿತ್ರಾ ಲೋಕೇಶ್ : ನನಗೆ ಈಗ ಜೀವಭಯ ಇದೆ. ರಕ್ಷಣೆ ಬೇಕಿದೆ. ನನ್ನ ಮಾನ ಮರ್ಯಾದೆ ತೆಗೆಯೋದಷ್ಟೇ ಇವರ ಉದ್ದೇಶ.
ಪ್ರಶ್ನೆ : ನರೇಶ್ ಪತ್ನಿ ರಮ್ಯಾ ರಘುಪತಿ ಆರೋಪಕ್ಕೆ ಏನು ಹೇಳ್ತೀರಿ?
ಪವಿತ್ರಾ ಲೋಕೇಶ್ : ರಮ್ಯಾ ಅವರ ಬಳಿ ಅವರೇ ನರೇಶ್ ಪತ್ನಿ ಅನ್ನೋದಕ್ಕೆ ಏನಿದೆ ಪ್ರೂಫ್. ಹೋಗಲಿ, ಅವರ ಮನೆಯ ವಿಷಯ. ನನ್ನ ಹೆಸರನ್ಯಾಕೆ ಎಳೆದು ತರ್ತಾ ಇದ್ದಾರೆ? ಅವರ ಮನೆ ವಿಷಯ, ಅವರ ಮನೆಯಲ್ಲಿಯೇ ಬಗೆಹರಿಸಿಕೊಳ್ಳಲಿ.