ಪವಿತ್ರಾ ಲೋಕೇಶ್ ಹೊಸ ಬದುಕಿನ ಕುರಿತಂತೆ ಇದೇ ಮೊದಲ ಬಾರಿಗೆ ಪತಿ ಸುಚೇಂದ್ರ ಪ್ರಸಾದ್ ಮಾತನಾಡಿದ್ದಾರೆ. ತಮ್ಮ ಪತ್ನಿಯ ಬದಲಿಗೆ ನರೇಶ್ ಅವರ ಮೂರನೇ ಹೆಂಡತಿ ರಮ್ಯಾ ರಘುಪತಿ ಬಗ್ಗೆ ಕಳಕಳಿ ವ್ಯಕ್ತಪಡಿಸಿರುವ ಸುಚೇಂದ್ರ ಪ್ರಸಾದ್ ಆ ಮಕ್ಕಳ ಸ್ಥಿತಿ ನೋಡಿದರೆ ನನಗೆ ಅಯ್ಯೋ ಎನಿಸುತ್ತಿದೆ ಎಂದಿದ್ದಾರೆ.
ಈಕೆಯದ್ದು ಲಪಟಾಯಿಸುವ ಬುದ್ದಿ, ಅವನದ್ದು ಲಂಪಟ ಬುದ್ದಿ. ನೋಡ್ತಾ ಇರಿ, ಇನ್ನು ಆರೇ ತಿಂಗಳು. ಇದೂ ಕೂಡಾ ಹೆಚ್ಚು ದಿನ ಇರೋದಿಲ್ಲ ಎಂದಿದ್ದಾರೆ ಸುಚೇಂದ್ರ ಪ್ರಸಾದ್. ಅವರ ಕೈಲಿ ನಾನು ನರಳಿದ್ದೇನೆ. ನನ್ನ ಮಕ್ಕಳಿಗೆ ಅರ್ಥ ಮಾಡಿಸಿದ್ದೇನೆ ಎಂದಿರುವ ಸುಚೇಂದ್ರ ಪ್ರಸಾದ್ ನರೇಶ್ ಬಗ್ಗೆಯೂ ಕಿಡಿಕಾರಿದ್ದಾರೆ. ಖಾಸಗಿ ಟಿವಿ ಚಾನೆಲ್ಲೊಂದರ ಜೊತೆ ಮಾತನಾಡಿರುವ ಅವರ ಆಡಿಯೋ ಈಗ ವೈರಲ್ ಆಗುತ್ತಿದೆ.