` ಪವಿತ್ರಾ ಲೋಕೇಶ್ ನನಗೆ ಒಳ್ಳೆ ಫ್ರೆಂಡ್ : ನರೇಶ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಪವಿತ್ರಾ ಲೋಕೇಶ್ ನನಗೆ ಒಳ್ಳೆ ಫ್ರೆಂಡ್ : ನರೇಶ್
Pavithra Lokesh, Naresh

ಪವಿತ್ರಾ ಲೋಕೇಶ್ ಅವರ ದಾಂಪತ್ಯ ಜೀವನದಲ್ಲಿ ಎದ್ದಿರುವ ಬಿರುಗಾಳಿಗೆ ಸ್ವತಃ ತೆಲುಗು ನರೇಶ್ ಉತ್ತರ ಕೊಟ್ಟಿದ್ದಾರೆ. ಪವಿತ್ರಾ ಲೋಕೇಶ್ ಜೊತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದೇನೆ. ಅವರು ನನಗೆ ಒಳ್ಳೆಯ ಫ್ರೆಂಡ್ ಎಂದಿದ್ದಾರೆ ನರೇಶ್. ಪವಿತ್ರಾ ಲೋಕೇಶ್ ಅವರ ಜೊತೆ 4 ವರ್ಷಗಳ ಹಿಂದೆ ನಟಿಸಿದ್ದೆ ಎಂದಿದ್ದಾರೆ.

ಇನ್ನು ತಮ್ಮ ವಿರುದ್ಧ ತಮ್ಮ 3ನೇ ಪತ್ನಿ ರಮ್ಯಾ ರಘುಪತಿ ಮಾಡಿರುವ ಆರೋಪಗಳಿಗೆ ಉತ್ತರ ಕೊಟ್ಟಿರುವ ನರೇಶ್ ನಾನು ರಮ್ಯಾರನ್ನು ಮದುವೆಯಾಗಿ ತಪ್ಪು ಮಾಡಿದೆ. ಅವರನ್ನು ಮದುವೆಯಾಗಿ 10 ವರ್ಷಗಳಲ್ಲಿ ನಾನು ನರಕ ಅನುಭವಿಸಿದ್ದೇನೆ. ಅವಳೊಬ್ಬಳು ದೊಡ್ಡ ಫ್ರಾಡ್. 100ಕ್ಕೂ ಹೆಚ್ಚು ಜನರಿಗೆ ಮೋಸ ಮಾಡಿದ್ದಾಳೆ. ನನಗೆ ಬೆದರಿಕೆ ಇದೆ. ಮಗನ ಮುಖ ನೋಡಿಕೊಂಡು ಸುಮ್ಮನಿದ್ದೆ. ಡೈವೋರ್ಸ್ ಕೊಡುತ್ತೇನೆ. ನನಗೂ ಭಾವನೆ ಇದೆ ಎಂದಿರುವ ನರೇಶ್ ನನಗೂ ಭಾವನೆಗಳಿವೆ. ಕರ್ನಾಟಕಕ್ಕೆ ನಾನು ಬಂದಿದ್ದೇ ಸ್ಪಷ್ಟನೆ ಕೊಡೋದಕ್ಕೆ ಎಂದಿದ್ದಾರೆ.