` ಅನಾಥ ಮಹಿಳೆಗೆ ಮನೆ ಕಟ್ಟಿಸಿಕೊಟ್ಟ ಕಿಚ್ಚ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಅನಾಥ ಮಹಿಳೆಗೆ ಮನೆ ಕಟ್ಟಿಸಿಕೊಟ್ಟ ಕಿಚ್ಚ
Kiccha Sudeep

ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದರೂ ಅವರ ಸಮಾಜ ಸೇವೆ ಕೆಲಸಗಳು ಮಾತ್ರ ನಿರಂತರವಾಗಿ ನಡೆಯುತ್ತಿವೆ. ಈಗ ಮತ್ತೊಂದು ಪುಣ್ಯದ ಕೆಲಸ ಮಾಡಿದ್ದಾರೆ. ಬಡವರಿಗೆ, ಶ್ರಮಿಕರಿಗೆ ಸಹಾಯ ಮಾಡುವುದನ್ನು ಮರೆಯದ ಸುದೀಪ್ ಅದಕ್ಕಾಗಿ ಒಂದು ಟ್ರಸ್ಟ್ ಕಟ್ಟಿರುವುದು ಗೊತ್ತಿದೆಯಷ್ಟೇ. ಆ ಟ್ರಸ್ಟ್ ಮೂಲಕ ಸಮಾಜಮುಖಿ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ.

ಚಿತ್ರದುರ್ಗದ ಚಳ್ಳಕೆರೆಯ ಪುಟ್ಟ ಗ್ರಾಮದ ಮಹಿಳೆ ಹೊನ್ನೂರಮ್ಮ. ಅನಾಥೆ. ಒಂದು ಹಳೆಯ ಮನೆಯಿತ್ತಾದರೂ ಬೀಳುವ ಸ್ಥಿತಿಯಲ್ಲಿತ್ತು. ಆ ಮನೆಯ ಮುಂಭಾಗದಲ್ಲಿ ಒಂದಿಷ್ಟು ಜಾಗ ಖಾಲಿಯಿತ್ತು. ಹಳೆ ಮನೆ ದುರಸ್ಥಿ ಮಾಡಿಸಿ, ಖಾಲಿಯಿದ್ದ ಜಾಗದಲ್ಲಿ ಪುಟ್ಟದೊಂದು ಶೀಟ್ ಮನೆ ಕಟ್ಟಿಸಿಕೊಟ್ಟಿದ್ದಾರೆ ಸುದೀಪ್.

ಸುಮಾರು 2 ಲಕ್ಷ ರೂ ವೆಚ್ಚದಲ್ಲಿ ಒಂದು ಕೋಣೆ, ಬಚ್ಚಲುಮನೆ ಇರೋ ಪುಟ್ಟ ಶೀಟ್ ಮನೆ ಕಟ್ಟಿಸಿದ್ದಾರೆ. ಈ ಮನೆ ನಮಗೆ ರಕ್ಷಣೆ ನೀಡುತ್ತಿದೆ. ಸುದೀಪಣ್ಣಂಗೆ ಧನ್ಯವಾದ ಎಂದಿದ್ದಾರೆ ಹೊನ್ನೂರಮ್ಮ.