ಬೈರಾಗಿ ಈಗ ಚಿತ್ರಮಂದಿರಗಳಲ್ಲಿದೆ. ಈ ಚಿತ್ರ ಶಿವಣ್ಣ ಅಭಿಮಾನಿಗಳಿಗೆ ಹಬ್ಬವಂತೂ ಹೌದು. ಅದ್ಧೂರಿ ಪ್ರಚಾರದೊಂದಿಗೆ ರಿಲೀಸ್ ಆಗುತ್ತಿರೋ ಸಿನಿಮಾ, ಶಿವಣ್ಣ ವೃತ್ತಿ ಜೀವನದ 123ನೇ ಸಿನಿಮಾ. ವಿಜಯ್ ಮಿಲ್ಟನ್ ನಿರ್ದೇಶನದ ಚಿತ್ರಕ್ಕೆ ಕೃಷ್ಣ ಸಾರ್ಥಕ್ ಬಂಡವಾಳ ಹೂಡಿದ್ದಾರೆ. ಚಿತ್ರ ಹೈಲೈಟ್ಸ್ ನೋಡೋದಾದರೆ..
ಟಗರು ನಂತರ ಶಿವಣ್ಣ ಮತ್ತು ಡಾಲಿ ಒಟ್ಟಿಗೇ ನಟಿಸಿರುವ ಸಿನಿಮಾ. ಶಿವಣ್ಣ ಜೊತೆ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಕೂಡಾ ನಟಿಸಿದ್ದಾರೆ.
ಬಹಳ ವರ್ಷಗಳ ನಂತರ ಶಿವಣ್ಣ ಮತ್ತು ಶಶಿಕುಮಾರ್ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಣವಿಕ್ರಮ ನಂತರ ಅಂಜಲಿ ನಟಿಸಿರುವ 2ನೇ ಕನ್ನಡ ಸಿನಿಮಾ ಇದು. ಮೊದಲು ರಣವಿಕ್ರಮದಲ್ಲಿ ಅಪ್ಪುಗೆ ನಾಯಕಿಯಾಗಿದ್ದವರು, ಈ ಚಿತ್ರದಲ್ಲಿ ಶಿವಣ್ಣಂಗೆ ಜೋಡಿಯಾಗಿದ್ದಾರೆ.
ಶಿವಣ್ಣ ಈ ಚಿತ್ರದ ರಿದಂ ಆಫ್ ಶಿವಪ್ಪ ಹಾಡು ಹಾಡಿದ್ದಾರೆ. ಈ ಹಾಡಿಗೆ ಜೊತೆಯಾಗಿರೋ ನಾಯಕ ಕಂ ಗಾಯಕ ಶರಣ್. ವಿಶೇಷವೆಂದರೆ ಈ ಹಾಡನ್ನು ಅಪ್ಪು ಜೊತೆ ಶಿವಣ್ಣ ಹಾಡಬೇಕಿತ್ತು. ಅಣ್ಣನ ಜೊತೆ ಹಾಡುವ ಮೊದಲ ಹಾಡಿದು ಎಂದು ಖುಷಿಯಾಗಿದ್ದರಂತೆ ಅಪ್ಪು.
ಅಷ್ಟೇ ಅಲ್ಲ, ಚಿತ್ರದ ಇನ್ನೊಂದು ಹಾಡನ್ನು ಶಿವಣ್ಣ ಮೇಲಿನ ಪ್ರೀತಿಗಾಗಿ ವಸಿಷ್ಠ ಸಿಂಹ ಹಾಡಿದ್ದಾರೆ.
ಅಪ್ಪು ಇಲ್ಲದೆ.. ಪುನೀತ್ ಅನುಪಸ್ಥಿತಿಯಲ್ಲಿ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾ ಬೈರಾಗಿ.
ಭಜರಂಗಿ 2 ನಂತರ ಬರುತ್ತಿರೋ ಮೊದಲ ಸಿನಿಮಾ ಬೈರಾಗಿ.
ಈ ಚಿತ್ರಕ್ಕಾಗಿ ಮೈಸೂರಿನಲ್ಲಿ ಭರ್ಜರಿ ತಯಾರಿ ನಡೆದಿದೆ. ಎಕೆ47 ನಂತರ ಇದೇ ಮೊದಲ ಬಾರಿಗೆ 80 ಅಡಿ ಎತ್ತರದ ಕಟೌಟ್ ಹಾಕುತ್ತಿದ್ದಾರೆ ಫ್ಯಾನ್ಸ್.
ಇದೇ ಮೊದಲ ಬಾರಿಗೆ ತುಳು ಚಿತ್ರರಂಗದ ಕ್ರಷ್ ಎನಿಸಿಕೊಂಡಿರುವ ಯಶ ಶಿವಕುಮಾರ್ ನಟಿಸಿರುವ ಮೊದಲ ಕನ್ನಡ ಸಿನಿಮಾ ಬೈರಾಗಿ.
ಬೈರಾಗಿ 400ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ರಿಲೀಸ್ ಆಗಿದೆ.