` ಪೊಲೀಸ್ ಕಂಪ್ಲೇಂಟ್ ಕೊಟ್ಟ ಪವಿತ್ರಾ ಲೋಕೇಶ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಪೊಲೀಸ್ ಕಂಪ್ಲೇಂಟ್ ಕೊಟ್ಟ ಪವಿತ್ರಾ ಲೋಕೇಶ್
Pavithra Lokesh image

ಇತ್ತೀಚೆಗೆ ದಾಂಪತ್ಯ ವಿವಾದದಿಂದಾಗಿ ಸುದ್ದಿಯಲ್ಲಿರೋ ನಟಿ ಪವಿತ್ರಾ ಲೋಕೇಶ್ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮೈಸೂರಿನಲ್ಲಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬ ಪವಿತ್ರಾ ಅವರ ಹೆಸರಲ್ಲಿ ಒಂದು ಫೇಸ್`ಬುಕ್ ಖಾತೆ ತೆರೆದು ಅಶ್ಲೀಲ ಸಂದೇಶ ಮತ್ತು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾನೆ ಎನ್ನುವುದು ಪವಿತ್ರಾ ಲೋಕೇಶ್ ಕೊಟ್ಟಿರೋ ದೂರು.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಪವಿತ್ರಾ ಲೋಕೇಶ್ ಎಲ್ಲಿಯೂ ತಮ್ಮ ಇತ್ತೀಚಿನ ವಿವಾದದ ಬಗ್ಗೆ ತುಟಿ ಬಿಚ್ಚಿಲ್ಲ. ನಟ ಮಹೇಶ್ ಬಾಬು ಅವರಿಗೆ ವಾರಸೆಯಲ್ಲಿ ಅಣ್ಣನಾಗಬೇಕಿರುವ ನಟ ನರೇಶ್ ಅವರೊಂದಿಗೆ ಪವಿತ್ರಾ ಮದುವೆಯಾಗಿದ್ದಾರೆ ಅನ್ನೋ ಸುದ್ದಿ ಇದೆ. ಸುಚೇಂದ್ರ ಪ್ರಸಾದ್ ಅವರೊಂದಿಗಿನ ದಾಂಪತ್ಯ ಜೀವನ ಕೊನೆಯಾಗಿದೆ ಎನ್ನುವ ಸುದ್ದಿ ಸಂಚಲನ ಸೃಷ್ಟಿಸಿದೆ. ಸುಚೇಂದ್ರ ಪ್ರಸಾದ್ ಅವರ ಜೊತೆ ಪವಿತ್ರಾ ಡೈವೋರ್ಸ್ ಆಗಿಲ್ಲ. ಅತ್ತ ನಟ ನರೇಶ್ ಕೂಡಾ ತಮ್ಮ 3ನೇ ಪತ್ನಿ ರಮ್ಯಾ ಅವರಿಗೆ ವಿಚ್ಛೇದನ ಕೊಟ್ಟಿಲ್ಲ. ಡೈವೋರ್ಸ್ ಕೊಡಲ್ಲ ಎಂದಿರುವ ರಮ್ಯಾ, ಪವಿತ್ರಾ ವಿರುದ್ಧವೂ ಆರೋಪ ಮಾಡಿದ್ದಾರೆ.

ವಿವಾದ ಎಷ್ಟೇ ಆಗುತ್ತಿದ್ದರೂ.. ತಮ್ಮ ಮತ್ತು ನರೇಶ್ ಅವರ ಕುರಿತ ಸುದ್ದಿಗಳ ಬಗ್ಗೆ ಪವಿತ್ರಾ ಲೋಕೇಶ್ ಮೌನ ಕಾಯ್ದುಕೊಂಡಿದ್ದಾರೆ.