777 ಚಾರ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇತ್ತೀಚೆಗೆ ಚಾರ್ಲಿಯಷ್ಟು ಕಣ್ಣೀರು ಹಾಕಿಸಿದ ಇನ್ನೊಂದು ಸಿನಿಮಾ ಇಲ್ಲ. ತಾಯಿ-ತಂಗಿ ಸೆಂಟಿಮೆಂಟ್`ಗೆ ಕಣ್ಣೀರಿಟ್ಟಿದ್ದ ಪ್ರೇಕ್ಷಕರಿಗೆ ನಾಯಿ ಸೆಂಟಿಮೆಂಟ್ ತೋರಿಸಿ ಗೆದ್ದವರು ರಕ್ಷಿತ್ ಶೆಟ್ಟಿ. ದೇಶಾದ್ಯಂತ ಅದ್ಭುತ ಶೋ ಕಾಣ್ತಿರೋ ಚಾರ್ಲಿ ಈಗ 116 ಚಾರ್ಲಿ ಆಗಿದೆ. ರಕ್ಷಿತ್ ಶೆಟ್ಟಿ ಖುಷಿಯಾಗಿದ್ದಾರೆ. ವಿಶೇಷ ಏನಂದ್ರೆ..
777 ಚಾರ್ಲಿಗೆ ಐಎಂಡಿಬಿ ರೇಟಿಂಗ್ನಲ್ಲಿ 116ನೇ ಸ್ಥಾನ ಸಿಕ್ಕಿದೆ. ಅಂದ್ರೆ ಇದೂವರೆಗೆ ಸಿನಿಮಾ ನೋಡಿದವರು ಮತ್ತು ಅವರ ಮೆಚ್ಚುಗೆಯ ಆಧಾರದ ಮೇಲೆ ಕೊಡೋ ರ್ಯಾಂಕ್ ಅದು. ಆ ರ್ಯಾಂಕ್ನಲ್ಲೀಗ 777 ಚಾರ್ಲಿಗೆ 116ನೇ ರ್ಯಾಂಕ್ ಬಂದಿದೆ.
ಇಲ್ಲಿ ಇನ್ನೂ ಒಂದು ವಿಶೇಷ ಇದೆ. ಏಕೆಂದರೆ ಈ ಲಿಸ್ಟಿನಲ್ಲಿ 777 ಚಾರ್ಲಿಗೆ ಬಾಹುಬಲಿ, ಆರ್.ಆರ್.ಆರ್. ಕೆಜಿಎಫ್, ಡಿಡಿಎಲ್ಜೆ, ನಾಯಟ್ಟು, ಭಜರಂಗಿ ಬಾಯಿಜಾನ್ ಚಿತ್ರಗಳಿಗಿಂತ ಒಳ್ಳೆ ರ್ಯಾಂಕಿಂಗ್ ಇದೆ. ಕಿರಣ್ ರಾಜ್ ತಮ್ಮ ಮೊದಲ ನಿರ್ದೇಶನದಲ್ಲೇ ದೊಡ್ಡ ಮಟ್ಟಿಗೆ ಗೆದ್ದಿದ್ದಾರೆ. ಬಾಕ್ಸಾಫೀಸಿನಲ್ಲಿ.. ಪ್ರೇಕ್ಷಕರ ಹೃದಯದಲ್ಲಿ.. ವಿಮರ್ಶಕರ ದೃಷ್ಟಿಯಲ್ಲಿ.. ಚಿತ್ರರಂಗದ ತಂತ್ರಜ್ಞರ ದೃಷ್ಟಿಯಲ್ಲಿ.. ಎಲ್ಲ ದೃಷ್ಟಿಯಿಂದಲೂ ಪರಂವಾ ಸ್ಟುಡಿಯೋಸ್, ಕಿರಣ್ ರಾಜ್ ಅವರಿಗೆ ಒಳ್ಳೆ ರ್ಯಾಂಕ್ ಸಿಕ್ಕಿದೆ.